8:12 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ದುರಸ್ತಿಯ ಭಾಗ್ಯ ಕಾಣದ ಜಯಪುರ- ಬಸರೀಕಟ್ಟೆ ರಸ್ತೆ: ಸಂಸದರು, ಶಾಸಕರು ನೋಡಿ ಹೋದರೂ ನೋ ಯೂಸ್

15/07/2025, 14:06

ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು

info.reporterkarnataka@gmail.com

ಕಳೆದ ವರ್ಷ ಸುರಿದ ಭಾರೀ ಮಳೆಗೆ ಜಯಪುರದಿಂದ ಬಸರೀಕಟ್ಟೆ ಸಂಪರ್ಕಿಸುವ ಬಿಳಾಲುಕೊಪ್ಪ ಬಳಿ ಹಳ್ಳದ ನೀರು ರಸ್ತೆಯಲ್ಲೆ ಹರಿದು ಹೋಗಿ ರಸ್ತೆ ಹಾಗೂ ಚರಂಡಿ ಕೊಚ್ಚಿಹೋಗಿತ್ತು.
ಆಗ ಸ್ಥಳಕ್ಕೆ ಆಗಮಿಸಿದ್ದ ಸಂಸದರು, ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿಯನ್ನು ನೀಡಿದ್ದರು, ಆದರೂ ರಸ್ತೆ ಸರಿಪಡಿಸುವುದು ಬಿಡಿ ಸರಿಯಾದ ಚರಂಡಿಯ ವ್ಯವಸ್ಥೆಯೂ ಆಗದೆ ಹಾಗೆ ಇದೆ.
ಕಳೆದ ವರ್ಷ ಸುರಿದ ಮಳೆಗೆ ಚರಂಡಿಗಳು ಕೊರೆದು ಹೋಗಿದ್ದು, ಈ ಭಾರೀ ಚರಂಡಿ ಜೊತೆಗೆ ರಸ್ತೆಯೂ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದೆ. ಅದು ಅಲ್ಲದೇ ಮಳೆ ಬಂದಾಗ ರಸ್ತೆಯಲ್ಲೆ ಹರಿಯುವ ನೀರಿನಿಂದ ರಸ್ತೆ ಪಕ್ಕದಲ್ಲಿ ದೊಡ್ಡ ಕಂದಕವೂ ಸೃಷ್ಟಿಯಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.


ಹೊರನಾಡು-ಶೃಂಗೇರಿಯ ಮುಖ್ಯ ರಸ್ತೆಯು ಇದಾಗಿದ್ದು ನಿತ್ಯ ಸಂಚರಿಸುವ ವಾಹನ ಸವಾರರಿಗೂ ಈ ರಸ್ತೆ ಸವಾಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು