5:11 AM Monday7 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಜಪ್ಪಿನಮೊಗರು ನೆರೆ ಸಮಸ್ಯೆ ಮಳೆಯಿಂದಲ್ಲ, ಅವೈಜ್ಞಾನಿಕ ಲೇಔಟ್ ನಿಂದ!!: ಪಾಲಿಕೆ, ಮುಡಾ ಇನ್ನಾದರೂ ಎಚ್ಚೆತ್ತುಕೊಳ್ಳಲಿ

27/06/2024, 19:18

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರಿನಲ್ಲಿ ಕೇವಲ ಒಂದು ದಿನ ಸುರಿದ ಅವ್ಯಾಹತ ಮಳೆಗೆ ನಗರದ ಜಪ್ಪಿನ ಮೊಗರು ದೊಂಪದ ಬಲಿ ಗದ್ದೆ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಯಾವುದೇ ನಿಯಮ ಪಾಲಿಸದೆ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿಸಿ ಲೇಔಟ್ ಮಾಡಿರುವುದೇ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ.
ನಿನ್ನೆ ಸುರಿದ ಬಿರುಸಿನ ಮಳೆಗೆ ನೀರು ಹರಿದು ಹೋಗದೆ ದೊಂಪದ ಬಲಿ ಗದ್ದೆಯ ಸುತ್ತಮುತ್ತಲಿನ ಸುಮಾರು 10 ಮನೆಗಳು ಜಲಾವೃತ್ತಗೊಂಡಿವೆ.
ಗದ್ದೆ ಇದ್ದ ಜಾಗದಲ್ಲಿ ಮಣ್ಣು ಹಾಕಿ ಎತ್ತರ ಮಾಡಲಾಗಿದ್ದು, ಇದರಿಂದ ಸುತ್ತಲಿರುವ 10 ಮನೆಗಳಿಗೆ ನೀರು ನುಗ್ಗಿದೆ.
ಈ ಲೇಔಟ್ ನಲ್ಲಿ ಸುಮಾರು 50 ಮನೆಗಳನ್ನು ನಿರ್ಮಿಸುವ ಯೋಜನೆ ಇದೆ. ಇದಕ್ಕೆ ಅನುಮತಿ ನೀಡಬೇಕಾದರೂ ಮುಡಾ ಸರಿಯಾಗಿ ಪರಿಶೀಲನೆ ಮಾಡಬೇಕು. ಮನೆಗಳಿಗೆ ಸರಿಯಾದ ಸೆಟ್ ಬ್ಯಾಕ್, ಮಳೆ ನೀರು ಹರಿದು ಹೋಗಲು ರೈನ್ ಡ್ರೈನ್, ಒಳ ಚರಂಡಿ ವ್ಯವಸ್ಥೆ ಎಲ್ಲವನ್ನು ಪರಿಶೀಲಿಸಬೇಕು.


ಆದರೆ ಅದು ಯಾವುದೂ ಇಲ್ಲದೆ ಬೇಕಾದಲ್ಲೆಲ್ಲ ಮನೆ ಕಟ್ಟಿದರೆ ಇಂತಹ ಸಮಸ್ಯೆ ಎದುರಾಗುತ್ತದೆ. ಇಷ್ಟೇ ಅಲ್ಲದೆ ಸುಮಾರು 15 ವರ್ಷಗಳ ಹಿಂದೆ ರಸ್ತೆಗೆ ಕಾಂಕ್ರೀಟ್ ಮಾಡುವಾಗ ತೋಡು ನಿರ್ಮಾಣಕ್ಕೆ ಅಕ್ಕಪಕ್ಕದ ನಿವಾಸಿಗಳು ಜಾಗ ನೀಡದಿರುವುದು ಕೂಡ ನೆರೆ ಪರಿಸ್ಥಿತಿಗೆ ನೆರವಾಗಿದೆ.
ನಮ್ಮ ಜಾಗದಲ್ಲಿ ಸ್ವಲ್ಪ ಜಾಗವು ರೋಡಿನ ಅಭಿವೃದ್ದಿಗೆ ಇಡಲಾರೆವು ಎಂದು ಸ್ಥಳೀಯರು ಹೇಳಿದ್ದರು.
ಇನ್ನು ಜಪ್ಪಿನಮೊಗರು ಶಾಲಾ ಮೈದಾನ ಪಕ್ಕದಲ್ಲಿ ಕೂಡ ನೀರು ನಿಲ್ಲುತ್ತದೆ. ಜಪ್ಪಿನಮೊಗರು ಸರಕಾರಿ ಶಾಲೆಯ ಬಳಿಯಲ್ಲಿರುವ ಕೊರಗಜ್ಜನ ಗುಡಿಯ ಪಕ್ಕದ್ದಲ್ಲಿ ರಾಜಕಾಲುವೆಗೆ ಸೇರುವ ತೋಡು ಇದೆ. ಅದಕ್ಕೆ ಸಂಪರ್ಕಿಸಬೇಕು ಹಾಗೂ ಇತ್ತ ಲೇಔಟ್ ನಿಂದ ಯುವ ವೃಂದ ವಾಗಿ ಜಪ್ಪಿನಮೊಗರು ಶಾಲೆ ಕೊರಗಜ್ಜನ ಗುಡಿಯ ಪಕ್ಕ ತೋಡಿಗೆ ಸಂಪಕಿಸಬೇಕು. ಇನ್ನು ಈ ಸಮಸ್ಯೆಯ ತುದಿ ಜಪ್ಪಿನಮೊಗರು ಲಯನ್ಸ್ ಕ್ಲಬ್ ನಿಂದ 2 ಬದಿಯಿಂದ ಜಪ್ಪಿನ ಮೊಗರು ರಾಜಕಾಲುವೆಗೆ ಸಂಪರ್ಕ ಆಗುವಂತೆ ತೋಡಿನ ಅಗಲಿಕರಣ ಆಗಬೇಕು. ಇದೆಲ್ಲದಕ್ಕೂ ಜನರು ಮನಸ್ಸು ಮಾಡಿ ತೋಡಿನ ಅಗಲಿಕರಣಕ್ಕೆ ತಮ್ಮ ಜಾಗ ನೀಡಬೇಕಿದೆ.
ಪ್ರತಿ ವರ್ಷ ಇದೇ ಸಮಸ್ಯೆ ಯಲ್ಲಿ ಇಲ್ಲಿನ ನಿವಾಸಿಗಳು ಬದುಕಬೇಕು. ಈ ಸಮಸ್ಯೆ ಪರಿಹಾರವಾಗಬೇಕಾದರೆ ನುರಿತ ತಜ್ಞ ಇಂಜಿನಿಯರ್ ಬೇಕಾಗಿದೆ.
ಇನ್ನು ಕಾರ್ಪೋರೇಟರ್ ವೀಣಾ ಮಂಗಳ ಅವರಿಗೆ ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಮೂರು ವರ್ಷ ದಿಂದ ಸಾಧ್ಯ ವಾಗಿಲ್ಲ. ಕಾರಣ ಇವರು ಈ ಊರಿನವರೇ ಅಲ್ಲ. ಮೂಲತಃ ಎಕ್ಕೂರಿನವರು.

ಗದ್ದೆಯಿಂದ ಗದ್ದೆಗೆ ನೀರು ಹರಿದು ಹೋಗುತ್ತಿತು. ಲೇಔಟ್ ಅದು ಖಾಸಗಿಯಾಗಿ ಜಾಗ ಖರೀದಿ ಮಾಡಿ ಮಣ್ಣು ಹಾಕಿದ್ದಾರೆ. ಆದರೆ ಬಗ್ಗೆ ಮುಡಾಕ್ಕೆ ಸ್ಥಳೀಯರು ದೂರು ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಡ್ರೈನ್ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ. ನೀರು ಹರಿಯುವ ತೋಡಿನ ಕಾಮಗಾರಿ ನಡೆಯುತ್ತಿದೆ. ಸ್ಥಳೀಯರಲ್ಲಿ ಜಾಗ ನೀಡುವ ಬಗ್ಗೆ ಮಾತಾಡಿ ಬಗೆಹರಿಸಿದ್ದೇನೆ. ಸ್ಥಳೀಯರು ಒಪ್ಪಿದ್ದಾರೆ.

-ವೀಣಾ ಮಂಗಳ, ಸ್ಥಳೀಯ ಕಾರ್ಪೋರೇಟರ್, ಮಂಗಳೂರು ಮಹಾನಗರಪಾಲಿಕೆ

ಈ ಸಮಸ್ಯೆಯಲ್ಲಿ ರಾಜಕೀಯ ಮಾಡದೇ ಮುಂದಿನ ಪೀಳಿಗೆಗೆ ವ್ಯವಸ್ಥೆ ಮಾಡಿಕೊಡಬೇಕು. ನನ್ನ ಕುಟುಂಬದ ಜಾಗವು ರಸ್ತೆ ನಿರ್ಮಾಣ ಹಂತದಲ್ಲಿ ನನ್ನ ಹಿರಿಯರು ನೀಡಿದ್ದಾರೆ.
ಜನರು ಸಹಕರಿಸಿದ್ದೆ ಆದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಪೂರ್ಣ ಸಹಕಾರ ಇದೆ ಎಂದು ಅವರು ಹೇಳಿದರು.

ಸುಧಾಕರ್ ಜೆ ಜಪ್ಪಿನಮೊಗರು ಕಾಂಗ್ರೆಸ್ ವಾರ್ಡ್ ಸಮಿತಿ ಅಧ್ಯಕ್ಷ

ಇತ್ತೀಚಿನ ಸುದ್ದಿ

ಜಾಹೀರಾತು