ಇತ್ತೀಚಿನ ಸುದ್ದಿ
ಚಿಕ್ಕಮಗಳೂರಿಗೆ ಜನಾಕ್ರೋಶ ಯಾತ್ರೆ: ಕೊಟ್ಟಿಗೆಹಾರದಲ್ಲಿ ಬಿ.ವೈ. ವಿಜಯೇಂದ್ರರಿಗೆ ಭರ್ಜರಿ ಸ್ವಾಗತ
11/04/2025, 20:11

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಲು ಮಂಗಳೂರಿನಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಕೊಟ್ಟಿಗೆಹಾರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜಾ, ಧನಂಜಯ ಸರ್ಜಿ, ಮುಖಂಡರಾದ ವಿ.ಪ. ಸದಸ್ಯ ರವಿಕುಮಾರ್, ಪುಣ್ಯಪಾಲ್, ವಿಜಯಕುಮಾರ್, ದೀಪಕ್ ದೊಡ್ಡಯ್ಯ, ಸಂತೋಷ್ ಕೋಟ್ಯಾನ್, ಬಿ.ಬಿ. ಮಂಜುನಾಥ್, ಶಶಿ ಆಲ್ದೂರು, ಪರೀಕ್ಷಿತ್ ಜಾವಳಿ, ಪಲ್ಗುಣಿ ಶರತ್, ಸಂಜಯ್ ಗೌಡ ಅವಿನಾಶ್ ಜನ್ನಾಪುರ ಚಿರಾಗ್ ಮಧು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.
ಬಿ.ವೈ. ವಿಜಯೇಂದ್ರ ಅವರ ಆಗಮನದಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕುದುರಿಸಿದೆ ಎಂದು ಸ್ಥಳೀಯ ಮುಖಂಡರ ಅಂಬೋಣ.