6:12 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಜನ ಸಾಮಾನ್ಯರನ್ನು ದೋಚುವ ಟೋಲ್ ಗೇಟ್ ಸಂಸ್ಕೃತಿ ನನ್ನ ಕ್ಷೇತ್ರಕ್ಕೆ ಬೇಡ: ಸಿಎಲ್ ಪಿ  ಉಪ ನಾಯಕ ಖಾದರ್

30/01/2022, 23:47

ತೊಕ್ಕೊಟ್ಟು(reporterkarnataka.com): ಜನ ಸಾಮಾನ್ಯರನ್ನು ದೋಚುವ ಟೋಲ್ ಗೇಟ್ ಸಂಸ್ಕೃತಿ ನನ್ನ ಕ್ಷೇತ್ರಕ್ಕೆ ಬೇಡ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಖಾದರ್ ಹೇಳಿದರು.


ಅವರು ನಾಟೆಕಲ್ ಜಂಕ್ಷನ್ ನಿಂದ ಅಸೈಗೋಳಿ ಜಂಕ್ಷನ್ ವರೆಗೆ 10 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಕಾಮಗಾರಿಗೆ  ಕೇಂದ್ರ ಸರಕಾರದ ಅನುದಾನ ಬಿಡುಗಡೆಯಾಗಿದ್ದರೆ ಟೋಲ್ ಗೇಟನ್ನು ಪ್ರಾರಂಭಿಸಲಿದ್ದರು. ಆದರೆ ಬಡ ಸಾಮಾನ್ಯರನ್ನು ದೋಚುವ ಟೋಲ್ ಗೇಟ್ ಸಂಸ್ಕೃತಿ ನನ್ನ ಕ್ಷೇತ್ರಕ್ಕೆ ಬರಬಾರದೆಂಬ ಉದ್ದೇಶದಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಈ ರಸ್ತೆ ನಡೆಸಲಾಗುವುದು ಎಂದರು.


ರಾಜ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್, ಸಹಾಯಕ ಕಾರ್ಯಪಾಲ ಇಂಜಿನಿಯರ್ ಕೆ.ಟಿ.ಚಂದ್ರ ಶೇಕರಯ್ಯ ಮತ್ತು ಕನ್ಸಲ್ಟೆಂಟ್ ಕೌಶಿಕ್ ಅವರೊಂದಿಗೆ ಖಾದರ್ ಕಾಮಗಾರಿಯ ಬಗ್ಗೆ ಮಾತುಕತೆ ನಡೆಸಿದರು.

ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂಚಲಾಕ್ಷಿ, ಬೆಳ್ಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಮಂಜನಾಡಿ ಪಂಚಾಯತ್ ಉಪಾಧ್ಯಕ್ಷ ವಿನ್ಸೆಂಟ್ ವೇಗಸ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪದ್ಮಾವತಿ ಕಾಂಗ್ರೆಸ್ ಪ್ರಮುಖರಾದ ಎನ್.ಎಸ್. ಕರೀಂ, ರವಿರಾಜ್ ಶೆಟ್ಟಿ ದೇರಳೆಕಟ್ಟೆ, ಟಿ.ಎಸ್ ಅಬ್ದುಲ್ಲಾ, ಅಬ್ದುರ್ರಹ್ಮಾನ್ ಕೋಡಿಜಾಲ್, ನಾಸೀರ್ ಸಾಮಾನಿಗೆ, ಇಸ್ಮಾಯಿಲ್ ನಾಟೆಕಲ್, ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ನಝರ್ ಷಾ ಪಟ್ಟೋರಿ, ಅಚ್ಚುತ ಗಟ್ಟಿ, ದೇವಣ್ಣ ಶೆಟ್ಟಿ, ಇಕ್ಬಾಲ್, ರುಕಿಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗುಲಾಬಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು