ಇತ್ತೀಚಿನ ಸುದ್ದಿ
ಜನವರಿ 4ರಂದು ಕೊಂಕಣಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ: ಆಹ್ವಾನ ಬಿಡುಗಡೆ
31/12/2024, 16:32
ಮಂಗಳೂರು(reporterkarnataka.com):ಕೊಂಕಣಿ ಭಾಷಾ ಮಂಡಳ್ ಕರ್ನಾಟಕವು ತನ್ನ ಸ್ಥಾಪನಾ ದಿನದ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜೊತೆಯಲ್ಲಿ ಜ.4ರಂದು ಒಂದು ದಿನದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಿದ್ದು, ಕರ್ನಾಟಕ ಮತ್ತು ಗೋವಾದ ವಿವಿಧ ಕೊಂಕಣಿಯ ಮಾತೃಭಾಷೆ ಇರುವ 300 ಕೊಂಕಣಿ ವಿದ್ಯಾರ್ಥಿಗಳು ಭಾಗವಹಿಸಲು ನೊಂದಣಿ ಮಾಡಿದ್ದಾರೆ.
ಈ ಸಮ್ಮೇಳನದ ಅಹ್ವಾನ ಬಿಡುಗಡೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇದರ ಕುಲಪತಿ ಡಾ.ಪಾ ಪ್ರವೀಣ್ ಮಾರ್ಟಿಸ್ ಮಾಡಿದರು.
ಗೋವಾ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ವಸಂತ್ ಭಾಗ್ವತ್ ಸಾವಂತ್ ಮುಖ್ಯ ಅಥಿತಿಯಾಗಿ ಮತ್ತು ಕಾರ್ಯದರ್ಶಿ ಪರಾಗ್ ನಗರ್‌ಸೇಕರ್ ಭಾಗವಹಿಸುವರು.
ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾಕ್ಟರೇಟ್ ರೊನಾಳ್ಡ್ ನಜ್ರೆತ್, ಎಸ್ ಎಲ್ ಶೇಟ್ ಜ್ಯುವೆಲ್ಲರಿ ಮಾಲಕ ಪ್ರಶಾಂತ ಶೇಟ್, ಕೆನರಾ ಬ್ಯಾಂಕ್ ಸರ್ಕಲ್ ಆಪೀಸ್ ಜನರಲ್ ಮೆನೇಜರ್ ಸುದಾಕರ್ ಕೊತಾರಿ ಇರುವರು.
ಸಮಾರೋಪರಲ್ಲಿ ಉಪ ಕುಲಪತಿ ಫಾ ಮೆಲ್ವಿನ್ ಡಿಕೂನಾ ಅಧ್ಯಕ್ಷ ಹಾಗೂ ಸಮಾರೋಪ ಭಾಷಣವನ್ನು ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ ಆಲ್ವಿನ್ ಡೆಸಾ ಮಾಡುವರು. ಇದೇ ವೇಳೆ ಕಾಲೇಜಿನಲ್ಲಿ ಕೊಂಕಣಿ ವಿಭಾಗ ಮೂವತ್ತು ವರ್ಷಗಳ ಮೊದಲು ಆರಂಭ ಮಾಡಿದ ಪ್ರಾಂಶುಪಾಲ ಫಾ ಪ್ರಶಾಂತ ಮಾಡ್ತ ಅವರಿಗೆ ಸನ್ಮಾನ ಮಾಡಲಾಗುವುದು. ಕೆಬಿಎಮ್‌ಕೆ ಅಧ್ಯಕ್ಷ ಕೆ ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಜೊತೆಯಲ್ಲಿ ಇರುವರು.
ಕಾರ್ಯಕ್ರಮ ಸಂಯೋಜನೆ ಕೆಬಿಎಮ್‌ಕೆ ಅಧ್ಯಕ್ಷ ಕೆ ವಸಂತ ರಾವ್ ಹಾಗೂ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಜೊತೆಯಲ್ಲಿ ಮಾಡಲಾಗುವುದು.
ಇಡೀ ಕಾರ್ಯಕ್ರಮದ ಸಂಯೋಜಕರಾದ ಕೆಬಿಎಮ್‌ಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ಸ್ವಾಗತಿಸಿ ಕೊಂಕಣಿ ವಿಭಾಗ ಮುಖ್ಯಸ್ಥೆ ಪ್ಲೊರಾ ಕಾಸ್ತೆಲಿನೊ ವಂದಿಸಿದರು. ಸಂಯೋಜಕಿ ಡಾ ಸೆವ್ರಿನ್ ಪಿಂಟೊ ನಿರೂಪಿಸಿದರು. ಮಿಚೆಲ್ ಅನಿಶಾ ಫೆರ್ನಾಂಡಿಸ್ ಸಾಂಸ್ಕೃತಿಕ ಕಾರ್ಯದರ್ಶಿ, ಕೊಂಕಣಿ ಸಂಘ ಶ್ರೀಮತಿ ಜನಿತಾ ರೇಗೊ, ನೋಂದಣಿ ಸಮಿತಿಯ ಡೆನಿತಾ ಡಿ’ಕುನ್ಹಾ, ಪ್ರೇಯರ್ ಇಂಚಾರ್ಜ್ ಸೇಜಲ್ ಪ್ರೀಮಾ ಅಲ್ವಾರೆಸ್, ಬೆಂಗಾವಲು ಸಮಿತಿಯ ಫ್ರಾಂಕ್ಲಿನ್ ಕ್ರಿಸ್ಟನ್ ಕ್ಯಾಸ್ಟೆಲಿನೊ ಕೊಂಕಣಿ ಸಂಘದ ವಿದ್ಯಾರ್ಥಿಗಳು ಹಾಜರಿದ್ದರು.