ಇತ್ತೀಚಿನ ಸುದ್ದಿ
ಜ.12: ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನಾದಿಂದ ‘ಮಕ್ಕಳ ಸಾಂಸ್ಕೃತಿಕ ಸಂಭ್ರಮ’
10/01/2022, 12:26

ಮಂಗಳೂರು(reporterkarnataka.com) ರಾಜ್ಯಮಟ್ಟದ ಕನ್ನಡ ಡಿಜಿಟಲ್ ಪತ್ರಿಕೆ’ರಿಪೋರ್ಟರ್ ಕರ್ನಾಟಕ’ ಸಹಯೋಗದೊಂದಿಗೆ ಆರದಿರಲಿ ಬದುಕು ಆರಾಧನಾ ಸಂಸ್ಥೆಯ ವಾಯ್ಸ್ ಆಫ್ ಆರಾಧನಾದಿಂದ ‘ಮಕ್ಕಳ ಸಾಂಸ್ಕೃತಿಕ ಸಂಭ್ರಮ’ ನಗರದ ಹೊರವಲಯದ ತೊಕ್ಕೊಟ್ಟು ಕಾಫಿಕಾಡಿನ ನಿರ್ವಿಕಲ್ಪ ಹಾಲ್ ನಲ್ಲಿ ಜನವರಿ 12ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ. ಸುವರ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಅಧ್ಯಕ್ಷತೆ ವಹಿಸುವರು. ಆರದಿರಲಿ ಆರಾಧನಾ ಸಂಸ್ಥೆಯ ನಿರ್ವಾಹಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಮಂಗಳೂರು ವಿವಿಯ ನಾರಾಯಣ ಗುರು ಅಧ್ಯಯನ ಪೀಠದ ಸದಸ್ಯ ಸತೀಶ್ ಕರ್ಕೇರ, ನಟಿ ಆರಾಧನಾ ಭಟ್ ಮುಂತಾದವರು ಭಾಗವಹಿಸುವರು.