ಇತ್ತೀಚಿನ ಸುದ್ದಿ
ಜಮ್ಮು- ಕಾಶ್ಮೀರ: ಭಾರತೀಯ ಸೇನೆಯ ವಾಹನ ಭೀಕರ ಅಪಘಾತ; 10 ಸೈನಿಕರ ದಾರುಣ ಸಾವು
22/01/2026, 19:55
ಜಮ್ಮು(reporterkarnataka.com): ಜಮ್ಮು ಮತ್ತು ಕಾಶ್ಮೀರದ ಭದೇರ್ವಾ-ಚಂಬಾ ರಸ್ತೆಯ ಖಾಂಟಾಪ್ ಪ್ರದೇಶದಲ್ಲಿ ಭಾರತೀಯ ಸೇನೆಯ ವಾಹನವೊಂದು ಭೀಕರ ಅಪಘಾತಕ್ಕೀಡಾದ ಪರಿಣಾಮ 10 ಸೈನಿಕರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮೂವರನ್ನು ಉಧಂಪುರದ ಸೇನಾ ಕಮಾಂಡ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. ಇತರ ಆರು ಜನರನ್ನು ನಿಗಾದಲ್ಲಿ ಇರಿಸಲಾಗಿದೆ, ಒಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ.
ನವೀಕರಣ: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭದೇರ್ವಾ-ಚಂಬಾ ರಸ್ತೆಯಿಂದ ವಾಹನ ಜಾರಿ ಕಮರಿಗೆ ಬಿದ್ದ ಪರಿಣಾಮ ಹತ್ತು ಭಾರತೀಯ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ; ಇತರ 7 ಮಂದಿ ಗಾಯಗೊಂಡಿದ್ದಾರೆ.













