8:13 AM Sunday27 - July 2025
ಬ್ರೇಕಿಂಗ್ ನ್ಯೂಸ್
ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ…

ಇತ್ತೀಚಿನ ಸುದ್ದಿ

ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ; ಸಸಿ ನಾಟಿ ಹೆಸರಿಗಷ್ಟೇ

10/05/2024, 21:52

ಕಾರ್ಕಳ(reporterkarnataka.com): ಜಾಗತಿಕ ತಾಪಮಾನದ ಬಗ್ಗೆ ಹಲವು ವರ್ಷಗಳಿಂದ ವಿಜ್ಞಾನಿಗಳು, ಪರಿಸರವಾದಿಗಳು ಬೊಬ್ಬೆ ಹಾಕುತ್ತಿದ್ದರೂ ನಾವು ಕ್ಯಾರೇ ಮಾಡಿಲ್ಲ. ಆದರೆ ಪ್ರಸಕ್ತ ಬೇಸಿಗೆಯಲ್ಲಿ ರಾಜ್ಯದಲ್ಲಿ ಭೂಮಿಯೇ ಧಗಧಗನೆ ಉರಿಯುತ್ತಿರುವಾಗ ಮರದ ಮಹತ್ವದ ಅರಿವು ಬರಲಾರಂಭಿಸುತ್ತದೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುವವರಿಗೆ ಕೆಟ್ಟ ಮೇಲೆಯೂ ಬುದ್ದಿ ಬರುವ ಲಕ್ಷಣ ಕಾಣುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಸಾವಿರಾರು ಮರಗಳು  ಬಲಿಯಾಗುತ್ತವೆ. ಆದರೆ ರಸ್ತೆ  ಕಾಮಗಾರಿ ಸಂದರ್ಭದಲ್ಲಿ ಬಲಿಯಾದ ಮರಗಳ ಬದಲು ಅದರ ಮೂರುಪಟ್ಟು ಹೆಚ್ಚು  ಗಿಡಗಳನ್ನು ಇಲಾಖೆ ನೆಡಬೇಕು. ಆದರೆ ಗುತ್ತಿಗೆ ಪಡೆದ ಕಂಪೆನಿಯು ಕಾಟಾಚಾರಕ್ಕೆ  ಗಿಡಗಳನ್ನು ನೆಟ್ಟು ಕೈತೊಳೆದುಕೊಂಡಿದೆ .ಈ ವಿಷಯವು ಪರಿಸರ ಪ್ರೇಮಿಗಳ ನಿದ್ದೆಗೆಡಿಸಿದೆ.
ಕಾರ್ಕಳ ರಾಷ್ಟ್ರೀಯ ಹೆದ್ದಾರಿ   ೧೬೯ ರಸ್ತೆ ಕಾಮಗಾರಿ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಮಂಗಳೂರಿನ ಬಿಕರ್ನ ಕಟ್ಟೆಯವರೆಗೆ ಕಾಮಗಾರಿ ವೆಗ ಪಡೆಯುತ್ತಿದೆ. ಆದರೆ ಈ ಸಂದರ್ಭದಲ್ಲಿ  ಸಾವಿರಾರು ಮರಗಳನ್ನು ಬಲಿತೆಗೆದುಕೊಳ್ಳಲಾಗಿದೆ.
ಕಡಿದ ಮರಗಳ ಬದಲಿಗೆ ರಸ್ತೆಯ ಇಕ್ಕೆಲಗಳಲ್ಲಿ  ಗಿಡಗಳನ್ನು ನಾಟಿ ಮಾಡುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿದ್ದು ಇದು ಬರೀ ಕಾಟಾಚಾರಕ್ಕೆ ನಾಟಿಯನ್ನು ಮಾಡುವಂತಿದೆ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ.
*ಗಿಡಗಳಿಗೆ ನೀರಿಲ್ಲ:*  ರಾಷ್ಟ್ರೀಯ ಹೆದ್ದಾರಿ  ಇಕ್ಕೆಲಗಳಲ್ಲಿ ನೆಟ್ಟಗಿಡಗಳಿಗೆ ನೀರು ಕೂಡ ಉಣಿಸುತಿಲ್ಲ. ಬಿಸಿಲಿನ ಝಳಕ್ಕೆ ಗಿಡಗಳು ಸೊರಗಿ ಹೋಗಿವೆ. ಅದರ ಜೊತೆಗೆ ಸುಮಾರು 1.5- 3  ಅಡಿಗಳ ಹತ್ತಿರಕ್ಕೆ ಒತ್ತೊತ್ತಾಗಿ  ಗಿಡಗಳನ್ನು ನಾಟಿ ಮಾಡುವ ಮೂಲಕ ಕಾಟಾಚಾರಕ್ಕೆ ಗಿಡಗಳನ್ನು ನೆಟ್ಟು ಕೈತೊಳೆದುಕೊಂಡಿದೆ. ಬಿಸಿಲಿಗೆ ಗಿಡಗಳಿಗೆ ನೆರಳಿನ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಪರಿಸರ ಆಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಿಡಗಳ ಬೆಳವಣಿಗೆಯಾದ ಬಳಿಕ ಹತ್ತಿರ ಗಿಡಗಳನ್ನು ನಾಟಿ ಮಾಡಿದ ಪರಿಣಾಮ ವರುಷಗಳು ಕಳೆದಂತೆ ಬೆಳವಣಿಗೆ ಕುಂಠಿತವಾಗುತ್ತದೆ.
*ಮರಗಳ ಮಾರಣಹೋಮ:* ಈಗಾಗಲೇ ರಾಷ್ಟ್ರೀಯ ಹೆದ್ದಾರಿ ೧೬೯ರ ಕಾಮಗಾರಿಯ ವೇಳೆ  ಕಾರ್ಕಳದಿಂದ ಮಂಗಳೂರಿನ ಬಿಕರ್ನ ಕಟ್ಟೆಯವರೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ನೂರಾರು ವರ್ಷಗಳ  ಬೃಹದಾಕಾರವಾಗಿ ಬೆಳೆದು ನಿಂತಿದ್ದ ಪಾರಂಪರಿಕ ಮರಗಳನ್ನು  ಕಡಿಯಲಾಗಿತ್ತು.
*ನಿಯಯಗಳೇನು:*
ಕಡಿದ ಮರಗಳ ಬದಲಿಗೆ ಮತ್ತೆ ಗಿಡಗಳ ನಾಟಿ ಮಾಡಲು ಗುತ್ತಿಗೆ ಪಡೆದ ಖಾಸಗಿ ಕಂಪೆನಿಯು ಅರಣ್ಯ ಇಲಾಖೆ ನಿಗದಿ ಪಡಿಸಿದ ಇಂತಿಷ್ಟು ಶುಲ್ಕವನ್ನು  ಪಾವತಿ ಮಾಡಬೇಕು.  ಹೀಗೆ ಪಾವತಿ ಮಾಡಲಾಗುವ ಹಣವನ್ನು ಬಳಕೆ ಮಾಡಿಕೊಂಡು ಮತ್ತೆ ರಸ್ತೆಯ ಬದಿಯಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ ಮೂರು ಪಟ್ಟು ಹೆಚ್ಚು ಗಿಡನೆಟ್ಟು ಪೋಷಿಸಿ ನೀರು, ಗಿಡಕ್ಕೆ ನೆರಳು ,ಗೊಬ್ಬರ ಒದಗಿಸಿ ಪೋಷಿಸುವುದು ಅರಣ್ಯ ಇಲಾಖೆ ಕೆಲಸ.
ಒತ್ತೊತ್ತಾಗಿ ನೆಟ್ಟಿರುವ  ಒಣಗಿ ಹೋಗುತ್ತಿರುವ ಗಿಡಗಳನ್ನು  ಇಲಾಖೆ ಮಧ್ಯಪ್ರವೇಶಿಸಿ ಪೋಷಿಸಲಿ.ಇಲ್ಲ ದಿದ್ದರೆ   ಮುಂದೆ ಬೃಹತ್ ಗಾತ್ರದಲ್ಲಿ ಬೆಳೆಯುವಲ್ಲಿ ತೊಂದರೆಯಾಗುತ್ತದೆ.  ನೆಟ್ಟ ಗಿಡಗಳಿಗೆ ನೀರುಣಿಸುವ ವ್ಯವಸ್ಥೆಯೂ ಇಲ್ಲಿಲ್ಲ ಹೀಗಾಗಿ ಕೆಲವೊಂದು ಗಿಡಗಳು ಸತ್ತು ಹೋಗುತ್ತಿದೆ ಎಂದು ಸಾಣೂರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಹೇಳುತ್ತಾರೆ.
ಕಾಟಾಚಾರಕ್ಕೆ ಗಿಡಗಳ  ನಾಟಿ ಮಾಡಿದ್ದಾರೆ .ಅನುಭವದ ಕೊರತೆ ಸಾಕ್ಷಿಯೆ ಅಥವಾ ಇಲಾಖೆಯ ಬೇಜಾವಾಬ್ದಾರಿ ತನವೇ .ಬಿಸಿಲಿಗೆ ಅನೇಕ ಗಿಡಗಳು ಸತ್ತುಹೋಗಿವೆ. ನೀರು ಒದಗಿಸದ ಗುತ್ತಿಗೆ ಪಡೆದ ಕಂಪೆನಿಯು ಸ್ಪಂದಿಸದಿರುವುದು ಖೇದಕರ ಎಂದು ಪರಿಸರವಾದಿ
ಕಾರ್ಕಳ ಪ್ರಸಾದ್ ಕಾಮತ್ ನುಡಿಯುತ್ತಾರೆ.
ಗಿಡ ನೆಟ್ಟ ಬಗ್ಗೆ ಮಾಹಿತಿ ಗಮನಕ್ಕೆ ಬಂದಿದ್ದು
ಅರಣ್ಯ ಇಲಾಖೆ ಈ ಗಿಡಗಳನ್ನು ನೆಟ್ಟಿಲ್ಲ.  ಗುತ್ತಿಗೆ ಪಡೆದ ಕಂಪೆನಿಯು ಗಿಡಗಳನ್ನು ನೆಟ್ಟಿದೆ.  ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಮಳೆಗಾಲದ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು. ಈಗ ನೆಟ್ಟ ಗಿಡಗಳನ್ನು ಮಳೆಗಾಲದ ಸಂದರ್ಭದಲ್ಲಿ ವ್ಯವಸ್ಥಿತವಾಗಿ ನೆಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ
ಪ್ರಭಾಕರ್ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು