ಇತ್ತೀಚಿನ ಸುದ್ದಿ
ಜಗಳೂರು: ಭೀಕರ ರಸ್ತೆ ಅಪಘಾತ; ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಕೂಡ್ಲಿಗಿಯ ಇಬ್ಬರು ಸೇರಿ 7 ಮಂದಿ ಸಾವು
14/01/2022, 20:41

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 56 ಬಂಗಾರಿಗುಡ್ಡದ ಬಳಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಅಸುನೀಗಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಇಂಡಿಕಾ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಭೀಕರ ದುರಂತ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರೆಲ್ಲರೂ ಯಾದಗಿರಿ ಜಿಲ್ಲೆಯ ಶಹಾಪುರ ನಿವಾಸಿಗಳು. ಬೆಂಗಳೂರಿನಿಂದ ಹೊಸಪೇಟೆ ಕಡೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೃತರ ವಿವರ: ಯಾದಗಿರಿ ಜಿಲ್ಲೆಯ ನಾಲ್ಕು, ವಿಜಯನಗರ ಜಿಲ್ಲೆಯ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಓರ್ವ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮಲ್ಲನ ಗೌಡ (22), ಕರದಕಲ್ ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ ಸಂತೋಷ (21) ಮಲಗಟ್ಟಿ ಗ್ರಾಮ, ಸುರಪುರ ತಾಲ್ಲೂಕು. ಸಂಜೀವ್ (20) – ಮಾವಿನಮಟ್ಟಿ, ಸುರಪುರ ತಾಲ್ಲೂಕು, ಜೈಬೀಮ್ (18 ) – ಹೂವಿನಹಳ್ಳಿ, ಸುರಪುರ ತಾಲ್ಲೂಕು, ರಾಘು (23) – ತಾಳಿಕೋಟೆ, ಬಿಜಾಪುರ ಜಿಲ್ಲೆ, ಸಿದ್ದೇಶ್( 20) – ಕೂಡ್ಲಿಗಿ, ವಿಜಯನಗರ ಜಿಲ್ಲೆ, ವೇದಮೂರ್ತಿ (18) – ಈಚಲಬೊಮ್ಮನಹಳ್ಳಿ, ಕೂಡ್ಲಗಿ ತಾಲ್ಲೂಕು. ಕೂಡ್ಲಿಗಿ ತಾಲೂಕಿನ ಇಬ್ಬರು; ಈ ಅಪಘಾತದಲ್ಲಿ ಕೂಡ್ಲಿಗಿ ಪಟ್ಟಣದವ ಒರ್ವ ಹಾಗೂ ತಾಲೂಕಿನ ಈಚಲಬೊಮ್ಮನಹಳ್ಳಿಯ ಒರ್ವ ಒಬ್ಬರು ಮೃತಪಟ್ಟಿದ್ದಾರೆ. ಕೂಡ್ಲಿಗಿಯ ಮೃತ ಯುವಕ ಸಿದ್ದೇಶ(20)ನ ಮನೆ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿದ್ದು, ಮನೆಯ ಯಲ್ಲಿ ಸುದ್ದಿ ತಿಳಿದಾಗಿನಿಂದ ದುಖಃ ಮಡುಗಟ್ಟಿದೆ. ಮೃತ ಸಿದ್ದೇಶನ ತಂದೆ ಬಕಸ್ತರ (ಸಿಗರೇಟ್)ನಾಗರಾಜ ಹಾಗೂ ತಾಯಿ ಕೊಟ್ರಮ್ಮ ರು ದಂಗುಬಡಿದವರಂತೆ ಅಘಾತಕ್ಕೊಳಗಾಗಿದ್ದಾರೆಸಂಬಂಧಿಗಳು ಹಾಗೂ ನೆರ ಹೊರೆಯವರು ಪುತ್ರ ಸಿದ್ದೇಶನ ಮನೆಗೆ ದೌಡಾಯಿಸಿದ್ದಾರೆ. ದುಖಃದಲ್ಲಿರುವ ಮೃತ ಪೋಷಕರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಇದೇ ಅಪಘಾತದಲ್ಲಿ ಸಿದ್ದೇಶನ ಹತ್ತಿರ ಸಂಬಂಧಿ ಈಚಲಬೊಮ್ಮನಹಳ್ಳಿಯ ವೇದಮೂರ್ತಿ(18)ಈನೊಂದಿಗೆ ಮೃತಪಟ್ಟಿದ್ದಾನೆ. ಇದು ಸಂಬಂಧಿಗಳಲ್ಲಿ ದುಃಖ ಮತ್ತಷ್ಟು ದುಪ್ಪಟ್ಟು ಗೊಳ್ಳಲು ಕಾರಣವಾಗಿದೆ.