4:42 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ…

ಇತ್ತೀಚಿನ ಸುದ್ದಿ

ಜಾದೂಗಾರ ಕುದ್ರೋಳಿ ಗಣೇಶ್ ಅವರ ‘ತುಳುನಾಡು ತುಡರ್ ಚೆಂಡು’ ಜಾದೂವಿಗೆ 2 ಅಂತಾರಾಷ್ಟ್ರೀಯ ಪುರಸ್ಕಾರ

21/12/2022, 12:46

ಮಂಗಳೂರು(reporterkarnataka.com): ಥಾಯ್ ಲ್ಯಾಂಡಿನ ಬ್ಯಾಂಕಾಕ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಜಾದೂ ಸಮ್ಮೇಳನದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಅವರು ಪ್ರಸುತ ಪಡಿಸಿದ ” ತುಳುನಾಡು ತುಡರ್ ಚೆಂಡು” ಜಾದೂವಿಗೆ ಎರಡು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಲಭಿಸಿವೆ.

ಜಗತ್ತಿನ ಅತ್ಯಂತ ಪುರಾತನ ಜಾದೂ ಆಗಿರುವ ಕಪ್ಸ್ ಆಂಡ್ ಬಾಲ್ಸ್ ಮ್ಯಾಜಿಕ್ ಅನ್ನು ಕುದ್ರೋಳಿ ಗಣೇಶ್ ಅವರು ನೂತನ ತಂತ್ರಗಾರಿಕೆಯ ಮೂಲಕ ತುಳು ಭಾಷೆ ಹಾಗೂ ಪಾಡ್ದನದ ಮೂಲಕ ಪ್ರಸ್ತುತ ಪಡಿಸಿದ ಸೃಜನಶೀಲತೆಯನ್ನು ಪರಿಗಣಿಸಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಬ್ರಹತ್ ಜಾದೂ ಸಂಸ್ಥೆ ಅನ್ನುವ ಹೆಗ್ಗಳಿಕೆ ಹೊಂದಿದ ಅಮೆರಿಕದ ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯು ಪ್ರತಿಷ್ಟಿತ “ಮರ್ಲಿನ್ ಮೆಡಲ್ ” ನೀಡಿ ಗೌರವಿಸಿದೆ.

ತುಳುನಾಡು ತುಡರ್ ಚೆಂಡು ಜಾದೂವಿನ ಹೊಸತನವನ್ನು ಗಮನಿಸಿ ವಿಶ್ವ ಜಾದೂ ಸಮ್ಮೇಳನ ಸಂಘಟಿಸಿದ ಥಾಯ್ ಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ ” ಮೋಸ್ಟ್ ಓರಿಜಿನಲ್ ಆಕ್ಟ್ ” ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯ ಅಧ್ಯಕ್ಷರಾದ ಅಮೆರಿಕದ ಜಾದೂಗಾರ ಟೋನಿ ಹಸೀನಿ ಹಾಗೂ ಉಕ್ರೇನಿನ ಜಾದೂಗಾರ ವೊರೋನಿನ್ ಅವರು ಕುದ್ರೋಳಿ ಗಣೇಶ್ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದರು. ಥಾಯ್ ಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ ಅಧ್ಯಕ್ಷರಾದ ಜಾದೂಗಾರ ಮಮದಾ ಹಾಗೂ ಭಾರತದ ದಿಲ್ಲಿ ಸ್ಕೂಲ್ ಆಫ್ ಮ್ಯಾಜಿಕ್ ಸಂಸ್ಥೆಯ ಅಧ್ಯಕ್ಷರಾದ ಜಾದೂಗಾರ ರಾಜ್ ಕುಮಾರ್ ಉಪಸ್ಥಿತರಿದ್ದರು.


ಹಾಂಗ್ ಕಾಂಗ್ ಜಾದೂಗಾರರಾದ ಅಲ್ಬರ್ಟ್ ಟಾಮ್ ಮತ್ತು ಬಾಂಡ್ ಲೀ, ಇಂಡೋನೇಶಿಯಾದ ಜಾದೂಗಾರ ಹ್ಯಾಂಡಿ, ಸಿಂಗಾಪುರದ ಜಾದೂಗಾರ ಕಸ್ಸಿಡಿ ಲೀ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದರು.
ಬ್ಯಾಂಕಾಕ್ ನ ಫ್ಯಾಶನ್ ಐಲ್ಯಾಂಡ್ ಮಾಲ್ ಪ್ರಾಂಗಣದಲ್ಲಿ ನಡೆದ ಐದು ದಿನಗಳ ವಿಶ್ವ ಜಾದೂ ಸಮ್ಮೇಳನದಲ್ಲಿ ಜಗತ್ತಿನ ಹತ್ತಕ್ಕೂ ಹೆಚ್ಚು ದೇಶಗಳ ನೂರಾರು ಜಾದೂಗಾರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು