ಇತ್ತೀಚಿನ ಸುದ್ದಿ
ಇತ್ತೀಚಿಗಿನ ಘಟನೆ ಸಂಬಂಧಿಸಿದಂತೆ ಶಿಕ್ಷಕಿಯ ತಕ್ಷಣದಿಂದ ವಜಾಗೊಳಿಸಲಾಗಿದೆ: ಸಂತ ಜೆರೋಸ ಶಾಲೆಯ ಮುಖ್ಯ ಶಿಕ್ಷಕಿ ಪ್ರಕಟಣೆ
12/02/2024, 19:48
ಮಂಗಳೂರು(reporterkarnataka.com): ಸಂತ ಜೆರೋಸ ಶಾಲೆಯು 60 ವರ್ಷಗಳ ಇತಿಹಾಸ ಹೊಂದಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಆದರೆ ಇತ್ತೀಚಿಗೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಸಿಸ್ಟರ್ ಪ್ರಭಾ ಅವರನ್ನು ಈ ಕ್ಷಣದಿಂದ ನಮ್ಮ ಸಂಸ್ಥೆಯಿಂದ ವಜಾಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಮತ್ತೊಬ್ಬ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಸೈಂಟ್ ಜೆರೋಸ ಹೈಯರ್ ಪ್ರೈಮರಿ ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಘಟನೆಯ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ನಡೆಯುತ್ತಿರುವ ತನಿಖೆಯು ಪಾರದರ್ಶಕತೆಯಿಂದ ಕೂಡಿರಲು ನಮ್ಮ ಸಹಕಾರ ನೀಡಲಾಗುವುದು. ಈ ತನಿಖೆಯ ಅಂತಿಮ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ ಮತ್ತು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪೋಷಕರಿಂದ ಇದೇ ರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇವೆ.
ಜೆರೋಸ ಶಾಲೆಯ ಇತಿಹಾಸದಲ್ಲಿ ಯಾವುದೇ ಇಂತಹ ಘಟನೆ ನಡೆದಿಲ್ಲ. ನಾವು ಸಾಂವಿಧಾನಿಕ ಸಿದ್ದಾಂತಗಳಿಗೆ ಬೆಲೆ ಕೊಟ್ಟು ಅವುಗಳಿಗೆ ಬದ್ದರಾಗಿ ಇರುತ್ತೇವೆ. ಮುಂದೆಯೂ ನಾವು ಎಲ್ಲ ಧರ್ಮಗಳು, ನಂಬಿಕೆಗಳು ಮತ್ತು ಆಚರಣೆಗಳನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಈ ದುರಾದೃಷ್ಟಕರ ಘಟನೆಯು ನಮ್ಮ ಮಧ್ಯೆ ತಾತ್ಕಾಲಿಕ ಅಪನಂಬಿಕೆಯನ್ನು ಸೃಷ್ಟಿಸಿದ್ದು, ನಮ್ಮ ಈ ನಡೆಯು ನಿಮ್ಮ ಸಹಕಾರದಿಂದ ಈ ನಂಬಿಕೆಯನ್ನು ಪುನಃ ನಿರ್ಮಿಸುವುದಕ್ಕೆ ಸಹಕಾರಿಯಾಗಲಿದೆ ಮತ್ತು ನಾವೆಲ್ಲ ನಮ್ಮ ವಿದ್ಯಾರ್ಥಿ ಗಳ ಉತ್ತಮ ಭವಿಷ್ಯಕ್ಕೆ ಒಟ್ಟಾಗಿ ಶ್ರಮಿಸೋಣ ಎಂದು ಮುಖ್ಯ ಶಿಕ್ಷಕಿಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.