ಇತ್ತೀಚಿನ ಸುದ್ದಿ
ಐತಿಹಾಸಿಕ ʼಅಮರನಾಥ ಯಾತ್ರೆʼ ಜೂನ್ 30ರಿಂದ ಆರಂಭ: 43 ದಿನ ಬಾಬಾ ಬರ್ವಾನಿಯ ದರ್ಶನಕ್ಕೆ ಅವಕಾಶ
28/03/2022, 15:31
ಹೊಸದಿಲ್ಲಿ(reporterkarnataka.com): ಐತಿಹಾಸಿಕ ಅಮರನಾಥ ಯಾತ್ರೆ ಜೂನ್ 30ರಿಂದ ಆರಂಭವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಇಂದು ಶ್ರೀಅಮರನಾಥಜೀ ದೇವಾಲಯ ಮಂಡಳಿಯ ಸಭೆ ಭಾನುವಾರ ನಡೆಯಿತು.
ಮುಂಬರುವ ಭೇಟಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಅದ್ರಂತೆ, ಈ ಬಾರಿಯ ಅಮರನಾಥ ಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಿ ರಕ್ಷಾ ಬಂಧನದ ದಿನದಂದು ಸಂಪ್ರದಾಯದಂತೆ ಕೊನೆಗೊಳ್ಳಲು ನಿರ್ಧರಿಸಲಾಗಿದೆ.
ಈ ವರ್ಷ, ಭಕ್ತರು ಸುಮಾರು 43 ದಿನಗಳ ಕಾಲ ಬಾಬಾ ಬರ್ವಾನಿಯ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಕಡ್ಡಾಯವಾಗಿದೆ.