ಇತ್ತೀಚಿನ ಸುದ್ದಿ
IRCTC ಮಕ್ಕಳ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ: ಹಾಫ್ ಟಿಕೆಟ್ಟೋ? ಫುಲ್ಲೋ?
18/08/2022, 10:04
ಹೊಸದಿಲ್ಲಿ(reporterkarnataka.com): ರೈಲು ಪ್ರಯಾಣದ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಟಿಕೆಟ್ ಬುಕ್ಕಿಂಗ್ ಮಾಡಬೇಕೋ ಬೇಡವೋ? ಹಾಫ್ ಟಿಕೆಟ್ಟೋ ಅಥವಾ ಫುಲ್ಲೋ ಎಂಬೆಲ್ಲಾ ಗೊಂದಲವಿರಬಹುದು. ಇಲ್ಲಿದೆ ಶಾಕಿಂಗ್ ಸತ್ಯ. IRCTC ಮಕ್ಕಳ ಟಿಕೆಟ್ ಬುಕಿಂಗ್ ನಿಯಮಗಳನ್ನು ಸಹ ಬದಲಾಯಿಸಿದೆ.
IRCTC ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ 1-5 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಬರ್ತ್ ಬೇಕಾಗಿದ್ದಲ್ಲಿ ಪೂರ್ಣ ಶುಲ್ಕವನ್ನು ಪಾವತಿಸಬೇಕು. ಬರ್ತ್ ಬೇಡ ಎಂದಾದಲ್ಲಿ ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು. 2020ರ ಸುತ್ತೋಲೆ ಪ್ರಕಾರ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ಮೀಸಲಾತಿ ಅಗತ್ಯವಿಲ್ಲ. ಉಚಿತವಾಗಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು.
11 ವರ್ಷದೊಳಗಿನ ಮಗುವಿಗೆ ಪೂರ್ಣ ಬರ್ತ್ ತೆಗೆದುಕೊಳ್ಳುತ್ತಿದ್ದರೆ, ಪೂರ್ತಿ ಶುಲ್ಕ ಪಾವತಿಸಬೇಕು. ಪೂರ್ತಿ ಬರ್ತ್ ತೆಗೆದುಕೊಳ್ಳದಿದ್ದರೆ ಟಿಕೆಟ್ ದರದ ಅರ್ಧದಷ್ಟು ಮಾತ್ರ ಪಾವತಿಸಬೇಕಾಗುತ್ತದೆ.