10:15 PM Tuesday31 - March 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4…

ಇತ್ತೀಚಿನ ಸುದ್ದಿ

ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ

31/03/2026, 22:13

ಮಂಗಳೂರು(Reporterkarnataka.com):ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕರಾವಳಿ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಮತ್ತೆ ರೈಲಿನಲ್ಲಿ ವಾಪಸಾಗುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನು ಬಜಪೆ ಪೊಲೀಸರು ಇಂದು ಬಂಧಿಸಿದ್ದಾರೆ.
ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25 ) ಬಂಧಿತ ಆರೋಪಿ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕಳವು ಪ್ರಕರಣ ಸಂಬಂಧ ಬಜಪೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಕರಾವಳಿ ಜಿಲ್ಲೆಯಲ್ಲಿ ಇನ್ನಷ್ಟು ಕಳ್ಳತನ ನಡೆಸಿದ ಪ್ರಕರಣಗಳು ಬಯಲಿಗೆ ಬಂದಿದೆ.
ಮಾರ್ಚ್ 3ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಬಾಗಿಲನ್ನು ಮುರಿದು ದೇವಸ್ಥಾನಕ್ಕೆ ಒಳನುಗ್ಗಿ, 3 ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ರೂ. 25,000/- ಹಣವನ್ನು ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗೆ ತಂಡವನ್ನು ರಚಿಸಲಾಗಿದ್ದು, ಪ್ರಕರಣದ ಆರೋಪಿತನಾದ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ ಎಂಬಾತನನ್ನು ಬಜಪೆ ಪೊಲೀಸರು ಖಚಿತ ಮಾಹಿತಿಯ ಆಧಾರದ ಮೇಲೆ ಇಂದು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗೆ ಒಳಪಡಿಸಿದಾಗ, ಆತನು ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕಳವಾಗಿದ್ದ ಕಾಣಿಕೆ ಹುಂಡಿಯನ್ನು ವಶಕ್ಕೆ ಪಡೆಯಲಾಗಿದೆ.
ಈತನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದ ಆರೋಪಿಯಾಗಿರುತ್ತಾನೆ. ಅಲ್ಲದೇ ಇದೇ ವರ್ಷದ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಕಳವು ಪ್ರಕರಣದಲ್ಲೂ ಭಾಗಿಯಾಗಿರುತ್ತಾನೆ.
ಆರೋಪಿಯು ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳ್ಳತನ ಮಾಡಿ, ಮತ್ತೆ ತಮಿಳುನಾಡಿಗೆ ತೆರಳಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಹೊಂದಿದವನಾಗಿದ್ದು, ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಮತ್ತು ಠಾಣಾ ಕ್ರೈಂ ಸಿಬ್ಬಂದಿಗಳಾದ ನೂತನ್, ರಾಜೇಶ್ ಮತ್ತು ಪ್ರಕಾಶ್ ರವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು