ಇತ್ತೀಚಿನ ಸುದ್ದಿ
ಇನ್ಸ್ಟಾಗ್ರಾಮ್ನಲ್ಲಿ ಪರಿಚಯ: ಗೆಳೆಯನ ಕಾಣಲು ಚೆನ್ನೈ ನಿಂದ ಸುರತ್ಕಲ್ ಗೆ ಬಂದ ಎಂಬಿಬಿಎಸ್ ವಿದ್ಯಾರ್ಥಿನಿ
21/10/2022, 22:19
ಮಂಗಳೂರು(reporterlarnataka.com): ಇನ್ಸ್ಟಾಗ್ರಾಮ್ನಿಂದ ಪರಿಚಯವಾದ ಗೆಳೆಯ ಭೇಟಿಯಾಗಲು ದೂರದ ಚೆನ್ನೈ ನಿಂದ ಕಡಲ ತೀರದ ಸುರತ್ಕಲ್ ಗೆ ಆಗಮಿಸಿದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ರಾಜಸ್ಥಾನ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ರೇಶು ಎಂಬಾಕೆ ಇನ್ಸ್ಟಾಗ್ರಾಮ್ನಿಂದ ಪರಿಚಯವಾದ ಎಂಜಿನಿಯರ್ ವಿದ್ಯಾರ್ಥಿಯ ಭೇಟಿಗೆ ಸುರತ್ಕಲ್ ಗೆ ಬಂದಿದ್ದಳು. ರೇಶು ಮಂಗಳೂರು ತಲುಪಿದಾಗ ಆಕೆಯ ಬ್ಯಾಗ್, ಮೊಬೈಲ್ ಕಳವಾಗಿತ್ತು. ಇದರಿಂದ ವಿಚಲಿತಳಾದ ಆಕೆ ಸುರತ್ಕಲ್ನ ಕಾಂತೇರಿ ದೈವಸ್ಥಾನದ ಬಳಿ ನಿಂತು ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಲು ಸ್ಥಳೀಯರಲ್ಲಿ ವಿಚಾರಿಸಿದ್ದಳು. ಯುವತಿಯ ನಡೆ ಬಗ್ಗೆ ಸಂಶಯಗೊಂಡ ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದರು.
ಠಾಣೆಯಲ್ಲಿ ಆಕೆಯನ್ನು ವಿಚಾರಿಸಿದಾಗ ಸ್ಥಳೀಯ ಸಂಸ್ಥೆಯ ಎಂಜಿನಿಯರ್ ವಿದ್ಯಾರ್ಥಿಯ ನೋಡಲು ಬಂದಿರುವ ವಿಷಯ ತಿಳಿದು ಬಂತು. ಇದೀಗ ಪೊಲೀಸರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.














