9:05 PM Wednesday7 - January 2026
ಬ್ರೇಕಿಂಗ್ ನ್ಯೂಸ್
ಬಾಂಗ್ಲಾದವರು ನುಸುಳುವವರೆಗೆ ಕೇಂದ್ರ ಗೃಹ ಇಲಾಖೆ ನಿದ್ದೆಗೆ ಜಾರಿತ್ತಾ?: ಸಚಿವ ಕೃಷ್ಣ ಬೈರೇಗೌಡ… ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ… ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ ಜನರ ಆಶೀರ್ವಾದಿಂದ ಸಾಧ್ಯವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್! ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ… Bangalore | ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಸಮ್ಮತಿ: 153 ಎಕರೆ…

ಇತ್ತೀಚಿನ ಸುದ್ದಿ

ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ ಆದೇಶ; ಉಪ ನೊಂದಣಾಧಿಕಾರಿ ಅಮಾನತು

06/01/2026, 19:26

ಬೆಂಗಳೂರು(reporterkarnataka.com): ಆನೇಕಲ್ ಅತ್ತಿಬೆಲೆಯಲ್ಲಿ ಇನ್ಫೋಸಿಸ್ ನಿಂದ 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸರಕಾರ ಆದೇಶ ಮಾಡಿದೆ.
ಬೆಂಗಳೂರು ಜಿಲ್ಲಾಧಿಕಾರಿ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೈಗೌಡ ಎಚ್ಚರಿಸಿದ್ದಾರೆ.

*ಏನಿದು ಪ್ರಕರಣ:?*
ಇನ್ಫೋಸಿಸ್ ಸಂಸ್ಥೆ ಅನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ತಾನು ಹೊಂದಿರುವ 53.5 ಎಕರೆ ಪ್ರದೇಶದ ಜಾಗವನ್ನು 250 ಕೊಟಿ ರೂ.ಗೆ ಪೂರ್ವಂಕರ ಕಂಪನಿಗೆ ಮಾರಾಟ ಮಾಡಿದೆ ಎಂದು ಆರೋಪಿಸಲಾಗಿದೆ. ತನ್ನ ಆಸ್ತಿಪಾಸ್ತಿಗಳ ಮರುವಿಂಗಡಣೆಯ ಭಾಗವಾಗಿ ಈ ಆಸ್ತಿಯನ್ನು ಮಾರಲಾಗಿದೆ ಎಂಬುದು ಇನ್ಫೋಸಿಸ್ ಹೇಳಿಕೆ ನೀಡಿದೆ.
ಜಮೀನು ಮಾರಾಟದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಲಾಗಿಲ್ಲ. ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಜೊತೆಗೆ, ಈ ಭೂಮಿ ಸರ್ಕಾರ ಎಲೋಟ್ ಮಾಡಿದ್ದಲ್ಲ. ಮಾರುಕಟ್ಟೆ ಮೌಲ್ಯಕ್ಕೆ ಖರೀದಿ ಮಾಡಿದ್ದಿದು ಎಂದು ಇನ್ಫೋಸಿಸ್ ಹೇಳಿಕೆ ಕೊಟ್ಟಿದೆ.

*ಉಪನೊಂದಣಾಧಿಕಾರಿ ಅಮಾನತು:*
ಇನ್ಫೋಸಿಸ್ ಭೂಮಿ ಮಾರಾಟ ನೆರವೇರಿಸಿದ ಸರ್ಜಾಪುರ ಉಪನೊಂದಣಾಧಿಕಾರಿ ರವಿ ಸಂಕನಗೌಡ ಅವರನ್ನು ಇಲಾಖೆ ಅಮಾನತು ಮಾಡಿದೆ. ಅಕ್ರಮ ರಿಜಿಸ್ಟ್ರೇಶನ್ ಮೂಲಕ 40 ಸೇಲ್ ಡೀಡ್ ಗ
ಳನ್ನು ನೊಂದಾಯಿಸಲಾಗಿದೆ ಎನ್ನುವುದು ಆರೋಪ.
ಕಾವೇರಿ 2.0 ಸಾಫ್ಟ್ ವೇರ್ ದುರುಪಯೋಗದ ಆರೋಪ
ಸೇಲ್ ಡೀಡ್ ಗಳನ್ನು ನೊಂದಾಯಿಸುವ ಕಾವೇರಿ 2.0 ರಿಜಿಸ್ಟ್ರೇಶನ್ ಸಾಫ್ಟ್ ವೇರ್ ನಲ್ಲಿ ಕೋರ್ಟ್ ಆದೇಶವಿರುವ ಪ್ರಕರಣಗಳಲ್ಲಿ ಸೇಲ್ ಡೀಡ್ ಗಳ ರಿಜಿಸ್ಟ್ರೇಶನ್ ಗಳಿಗೆ ವಿನಾಯಿತಿ ಕೊಡುವ ಅವಕಾಶ ಇದೆ. ಇದನ್ನು ದುರುಪಯೋಗಿಸಿಕೊಳ್ಳಲಾಗಿದೆ. ಕೋರ್ಟ್ ಆದೇಶ ಇಲ್ಲದಿದ್ದರೂ, ಕೋರ್ಟ್ ಆರ್ಡರ್ ಆಪ್ಷನ್ ಆಯ್ಕೆ ಮಾಡಿಕೊಂಡು ಸೇಲ್ ಡೀಡ್ ಗಳನ್ನು ನೊಂದಾಯಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ಫೋಸಿಸ್ ನಲ್ಲಿ ಜಮೀನು ಮಾರಾಟ ಮಾತ್ರವಲ್ಲ, ಇನ್ನೂ ಅನೇಕ ಪ್ರಕರಣಗಳು ಇದೇ ರೀತಿ ಆಗಿದೆ. ಹೀಗಾಗಿ ಉಪನೊಂದಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸರ್ಜಾರಪುರ ಮಾತ್ರವಲ್ಲ, ಬಾನಸವಾಡಿ, ವರ್ತೂರು ಮತ್ತು ಹಲಸರೂರು ಉಪನೊಂದಣಿ ಕಚೇರಿಗಳಲ್ಲೂ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಐವರು ಅಧಿಕಾರಿಗಳನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು