ಇತ್ತೀಚಿನ ಸುದ್ದಿ
ಅಮ್ಮನನ್ನು ಹುಡುಕಿ ನಾಡಿಗೆ ಬಂದ ಮರಿಯಾನೆ: ವಯನಾಡು ಸುಲ್ತಾನ್ ಬತ್ತೆರಿ ಕಾಡಿನಿಂದ ಎಚ್. ಡಿ ಕೋಟೆಗೆ!
20/08/2025, 11:40

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾಡಾನೆಗಳ ಹಿಂಡುನಿಂದ ಬೆರ್ಪಟ್ಟ ಮರಿಯಾನೆ ಯೊಂದು ಅಮ್ಮನನ್ನು ಹುಡುಕಿಕೊಂಡು ನಾಡಿಗೆ ಬಂದ ಘಟನೆ ಎಚ್. ಡಿ ಕೋಟೆಯ ವಡಕನಮಾಳ ಹಾಡಿಯಲ್ಲಿ ನಡೆದಿದೆ.
ಎರಡು ದಿನದ ಹಿಂದೆಯಷ್ಟೇ ಬಂಡೀಪುರ ವನ್ಯಧಾಮದ ಕೇರಳದ ವೈನಾಡು ಅರಣ್ಯದ ಸುಲ್ತಾನ್ ಬತ್ತೆರಿ (ಎದ್ಕಲ್ಲೂ ಗುಡ್ಡ ಬೆಟ್ಟ ) ಸಮೀಪದ ಅರಣ್ಯದಂಚಿನ ಗ್ರಾಮದ ಶಾಲೆಯ ಆವರಣದಲ್ಲಿ ಕಾಣಿಸಿಕೊಂಡಿದ್ದ ಈ ಆನೆ ಮರಿಯನ್ನು ಸ್ಥಳೀಯ ಮಾವುತರು ಕಾಡಿನಲ್ಲಿದ್ದ ಆನೆಗಳ ಹಿಂಡಿನೊಂದಿಗೆ ಸೇರಿಸಿದ್ದರು, ಆದರೆ ಅದೇ ಆನೆ ಮರಿ ತನ್ನ ಅಸಲಿ ತಾಯಿ ಸಿಗದ ಕಾರಣ ಮತ್ತೆ ಹೆಚ್. ಡಿ. ಕೋಟೆಯ ತೋಟದ ಮನೆ ಬಳಿ ಪತ್ತೆಯಾಗಿದ್ದು, ಸದ್ಯ ಬಂಡೀಪುರ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.