ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಹೆಚ್ಚುತ್ತಿರುವ ಅಪಘಾತ: ವಾಹನಗಳಲ್ಲಿ ಎಲ್ಇಡಿ ಬಲ್ಬ್ ಕಡಿವಾಣಕ್ಕೆ ಆಗ್ರಹ
27/11/2025, 19:01
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಹಲವು ವಾಹನಗಳಲ್ಲಿ ಹೆಚ್ಚಿನ ಬೆಳಕನ್ನು ಬೀರುವ ಎಲ್.ಇ.ಡಿ ಲೈಟ್ ಗಳ ಅಳವಡಿಕೆಯಿಂದ ಮುಂಭಾಗದಿಂದ ಬರುವ ವಾಹನಗಳಿಗೆ ಮುಂದೆ ದಾರಿ ಕಾಣದೆ ಅಪಘಾತಕ್ಕೆ ಒಳಗಾಗುವ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರವಾಸಿ ಜಿಲ್ಲೆಯಾದ ಕೊಡಗಿನಲ್ಲಿ ಐಷಾರಾಮಿ ವಾಹನಗಳಲ್ಲಿ ಸಂಚರಿಸುವವರು ಎಲ್.ಇ.ಡಿ ಬಲ್ಬ್ ಗಳ ಮೂಲಕ ಹೆಚ್ಚಿನ ಬೆಳಕಿನಿಂದ ಬಹಳಷ್ಟು ಅನಾಹುತಗಳು ಉಂಟಾಗುತ್ತಿವೆ. ಕುಶಾಲನಗರ ಮಡಿಕೇರಿ ವಿರಾಜಪೇಟೆ ಗೋಣಿಕೊಪ್ಪ ಪೊನ್ನoಪೇಟೆಗಳಲ್ಲಿ ಆಟೋಗಳಿಂದ ಹಿಡಿದು, ದೊಡ್ಡ ದೊಡ್ಡ ಐಷಾರಾಮಿ ವಾಹನಗಳಲ್ಲಿ ಎಲ್.ಇ.ಡಿ ಅಳವಡಿಸಿ ವೇಗವಾಗಿ ರಾತ್ರಿ ಸಂಚರಿಸುವ ದೃಶ್ಯ ಇದೀಗ ಹೆಚ್ಚಾಗಿದೆ. ಗೋಣಿಕೊಪ್ಪಲು, ಕೇರಳ ನಡುವೆ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಹಲವು ವಾಹನಗಳು ಎಲ್.ಇ.ಡಿ ಲೈಟ್ ಗಳನ್ನು ಹೊಂದಿದ್ದು ಇದರಿಂದ ಈ ಭಾಗದಲ್ಲಿ ಹಲವು ಅಪಘಾತಗಳು ರಾತ್ರಿ ಸಮಯದಲ್ಲಿ ನಡೆಯಲು ಕಾರಣವಾಗಿದೆ.
ಕಾನೂನಿನಂತೆ ಎಲ್. ಇ.ಡಿ ಲೈಟ್ ಗಳನ್ನು ಬಳಸಿದರೆ ಪೊಲೀಸರು ಹೆಚ್ಚಿನ ಮೊತ್ತದ ದಂಡವನ್ನು ವಿಧಿಸಬಹುದಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಇದುವರೆಗೂ ನಡೆದಿಲ್ಲ. ಮಹಾರಾಷ್ಟ್ರ ಗುಜರಾತ್ ಗಳಲ್ಲಿ, ಪ್ರತಿನಿತ್ಯ ಈ ಬಗ್ಗೆ ತಪಾಸಣೆ ನಡೆಯುತ್ತಿದ್ದು ತಪ್ಪಿತಸ್ಥರಿಗೆ 50,000 ಸ್ಥಳದಲ್ಲಿ ದಂಡ ವಿಧಿಸುವ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದೆ. ಕೊಡಗಿನ ಹಲವು ಭಾಗಗಳಲ್ಲಿ ರಾತ್ರಿ ಹೊತ್ತು ನಡೆಯುವ ಅಪಘಾತಕಗಳಲ್ಲಿ, ಹಿಟ್ ಅಂಡ್ ರನ್ ಕೇಸುಗಳು ಕೂಡ ಈಗ್ ಎಲ್ಇಡಿ ಲೈಟ್ ಹೆಚ್ಚಿನ ಬೆಳಕಿನಿಂದ ಮುಂದೆ ಸಾಗುವ ವಾಹನಗಳಿಗೆ ದಾರಿ ಕಾಣದೆ ಪಾದಚಾರಿಗಳಿಗೆ ಹಾಗೂ ಬೈಕ್ ಸವಾರರಿಗೆ ಗುದ್ದಿ ಹೋಗಿರುವ ಹಲವು ಪ್ರಕರಣಗಳು ನಮ್ಮ ಕಣ್ಣಮುಂದಿದೆ.
ಕೂಡಲೇ, ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.












