ಇತ್ತೀಚಿನ ಸುದ್ದಿ
ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಸ್ತೆ ಕಾಂಕ್ರೀಟಿಕರಣ, ಇಂಟರ್ ಲಾಕ್ ಅಳವಡಿಕೆ ಉದ್ಘಾಟನೆ; ಗುದ್ದಲಿ ಪೂಜೆ
17/10/2025, 20:05

ಸುರತ್ಕಲ್ (reporterkarnataka.com): ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕುಳಾಯಿ 9ನೇ ವಾರ್ಡಿನ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಸ್ತೆ ಕಾಂಕ್ರೀಟಿಕರಣ, ಇಂಟರ್ ಲಾಕ್ ಅಳವಡಿಕೆಯ ಉದ್ಘಾಟನೆ ಮತ್ತು ಗುದ್ದಲಿ ಪೂಜೆಯನ್ನು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ನೆರವೇರಿಸಿದರು.
ಈ ವೇಳೆ, ಸ್ಥಳೀಯ ನಿಕಟ ಪೂರ್ವ ಮನಪಾ ಸದಸ್ಯರಾದ
ವೇದಾವತಿ, ವರುಣ್ ಚೌಟ, ಮಹಾ ಶಕ್ತಿಕೇಂದ್ರ ಅಧ್ಯಕ್ಷ ಸುನೀಲ್ ಕುಳಾಯಿ, ಬಿಜೆಪಿ ಪ್ರಮುಖರಾದ ಯೋಗೀಶ್ ಸನಿಲ್, ಅಶೋಕ್ ಶೆಟ್ಟಿ, ವಿಠ್ಠಲ್ ಸಾಲ್ಯಾನ್, ಯಶ್ ಪಾಲ್ ಸಾಲ್ಯಾನ್, ದಿನಕರ್ ಇಡ್ಯಾ, ಸುರೇಶ್ ನಂದನಜಲು ಬೇಬಿ ಕುಲಾಲ್, ರಮೇಶ್ ಅಳಪೆ, ಬೂತ್ ಅಧ್ಯಕ್ಷರಾದ ದೀಪಕ್ ಕುಳಾಯಿ, ಅರ್ಚನಾ ಸುನೀಲ್ ಕುಳಾಯಿ ಸ್ಥಳೀಯರಾದ ಕೃಷ್ಣ ಹೆಬ್ಬಾರ್, ಸರಿತಾ ಜಿ ಪೈ, ಶಕುಂತಳಾ ಪ್ರಕಾಶ್, ಸ್ಥಳೀಯ ಕಾರ್ಯಕರ್ತರು ಮತ್ತು ನಾಗರಿಕರು ಉಪಸ್ಥಿತರಿದ್ದರು.