2:34 PM Tuesday3 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಸ್ನೇಹಾಲಯ ಸಂಸ್ಥೆಯ ನೂತನ ಸೌಲಭ್ಯಗಳಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸು ಉದ್ಘಾಟನೆ

07/06/2025, 22:01

ಕಾಸರಗೋಡು(reporterkarnataka.com): ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ತಮ್ಮ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆಯನ್ನು ನೆರವೇರಿಸಿದರು.


ಈ ಸೌಲಭ್ಯವನ್ನು ಮಂಗಳೂರಿನ MRPL ಸಂಸ್ಥೆಯ ಸಾಂಸ್ಥಿಕ ಸಮಾಜಿಕ ಯೋಜನೆಯಡಿ( CSR ಉಪಕ್ರಮದ ಅಡಿಯಲ್ಲಿ) ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಮಾಜಕಾಗಿ ರೋಗಿಗಳ ಚೇತರಿಕೆಯ ಹಾದಿಯಲ್ಲಿ ಸಬಲೀಕರಣಗೊಳ್ಳುವ ಅಭಿವ್ಯಕ್ತಿಶೀಲ ಕಲಾ ಚಿಕಿತ್ಸೆ ಮತ್ತು ವಿವಿಧ ಗುಣಪಡಿಸುವ ಶಾರಿರಿಕ್ ಹಾಗೂ ಮನಾಸಿಕ ಚಟುವಟಿಕೆಗಳಿಗೆ ಮೀಸಲಿಡಲಾಗುವುದು. .
ಉದ್ಘಾಟನಾ ಸಮಾರಂಭವು ಬಹಳ ಅರ್ಥಪೂರ್ಣವಾಗಿತ್ತು ಮತ್ತು ಹೃದಯಸ್ಪರ್ಶಿ ಕಾರ್ಯಕ್ರಮವಾಗಿತ್ತು, ಹಲವಾರು ಗಣ್ಯ ಅತಿಥಿಗಳ ಉಪಸ್ಥಿತಿಯಿಂದ ಕಾರ್ಯಕ್ರಮದ ಮೆರುಗು ಅಲಂಕರಿಸಲ್ಪಟ್ಟಿತು. MRPL ನ CSR ವಿಭಾಗದ ಹಿರಿಯ ವ್ಯವಸ್ಥಾಪಕ ಕೆ. ನಾಗರಾಜ್ ರಾವ್ ಅವರು ಮುಖ್ಯ ಅತಿಥಿಯಾಗಿ ಹಾಜರಿದ್ದು MRPL-ONGC ಮಂಗಳೂರಿನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್ ಅವರ ಪರವಾಗಿ ರಿಬ್ಬನ್ ಕತ್ತರಿಸುವ ಮೂಲಕ ಹೊಸ ಸೌಲಭ್ಯವನ್ನು ಉದ್ಘಾಟಿಸಿದರು.ನೆರೆದ ಅತಿಥಿಗಳು ದೀಪ ಬೆಳಗಿಸ್ಸಿ, ಹಾಗೂ ವನಮಹೋತ್ಸವ ಸಾಂಕೇತಿಸಲು ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೌರವಾನ್ವಿತ ಅತಿಥಿಗಳಾಗಿ
ಜಾನ್ ಬಿ. ಮೊಂತೆರೊ (ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಮಂಗಳೂರು), ಪೂಜ್ಯಶ್ರೀ ರಾಜ ಬಲ್ಚಡ (ಅರಸು ಮಂಜಿಹ್ನಾರ್ ಕ್ಷೇತ್ರ, ಉದ್ಯಾವರ ಮಾಡ), ಸ್ನೇಹಾಲಯದ ಚಾಪ್ಲಿನ್ ರೆವರೆಂಡ್ ಫಾದರ್ ಸಿರಿಲ್ ಡಿ’ಸೋಜಾ ಭಾಗವಹಿಸಿದ್ದರು.
ಮಂಗಳೂರಿನ ಪ್ರೇರಣಾ ಭಾಷಣಕಾರರಾದ ರಫೀಕ್ ಮಾಸ್ಟರ್,
ಸ್ನೇಹಾಲಯದ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಸಂಸ್ಥೆಯ ಧ್ಯೇಯದ ಆಶಯ ವ್ಯಕ್ತ ಪಡಿಸಿದರು.
ಸ್ನೇಹಾಲಯವನ್ನು ವ್ಯಸನದಿಂದ ಮುಕ್ತಿ ಬಯಸುವವರಿಗೆ ಒಂದು ಪವಿತ್ರ ಸ್ಥಳವನ್ನಾಗಿ ರೂಪಿಸಿದ ಸಮರ್ಪಣೆಯನ್ನು ಅವರ ಮಾತುಗಳು ಪ್ರತಿಧ್ವನಿಸಿದವು.
ಕಾರ್ಯಕ್ರಮವನ್ನು ಸೊಗಸಾಗಿಶ್ರೀ ಜಿಯೋ ಡಿಸಿಲ್ವಾ ಅವರು ನೀರೂಪಿಸಿದರು. ಒಲಿವಿಯಾ ಕ್ರಾಸ್ತಾ ಸ್ನೇಹಾಲಯದ ಕಾರ್ಯದರ್ಶಿಗಳು ಅತಿಥಿಗಳಿಗೆ, ವಿಶೇಷವಾಗಿ MRPL ಮಂಗಳೂರು ಅವರಿಗೆ ಮತ್ತು ಈ ಕನಸನ್ನು ನನಸಾಗಿಸಲು ಬೆಂಬಲ ನೀಡಿದ ಎಲ್ಲರಿಗೂ ಅಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಜೀವನ ಪರಿವರ್ತನೆಗೆ ಸ್ನೇಹಾಲಯದ ಅಚಲ ಬದ್ಧತೆಯನ್ನು ಅತಿಥಿ ಭಾಷಣಕಾರರು ಶ್ಲಾಘಿಸಿದರು, ಹೊಸ ಟೆರೇಸ್ ಜಾಗವು ಸೃಜನಶೀಲತೆ ಮತ್ತು ಅಭಿವ್ಯಕ್ತಿಯ ಮೂಲಕ ಗುಣಪಡಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು. ಅವರ ಹೃತ್ಪೂರ್ವಕ ಸಂದೇಶಗಳು ಸಹಾನುಭೂತಿಯ ಸೇವೆ ಮತ್ತು ಜವಾಬ್ದಾರಿಯುತ ಕಾರ್ಪೊರೇಟ್ ಪೌರತ್ವವು ಇಲ್ಲಿ ಸ್ವರ್ಗವನ್ನು ರೂಪಿಸಬಹುದು ಎಂಬ ಪ್ರಭಾವದ ಸಂದೇಶ ವನ್ನು ಸಾರಿದವು.

ಇತ್ತೀಚಿನ ಸುದ್ದಿ

ಜಾಹೀರಾತು