ಇತ್ತೀಚಿನ ಸುದ್ದಿ
ಸಿಲ್ವರ್ ಬೀಟೆ ಮರ ನಾಟ ಅಕ್ರಮ ಸಾಗಾಟ: ಓರ್ವ ಬಂಧನ
14/09/2025, 15:13

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterlarnataka@gmai.com
ಅಕ್ರಮವಾಗಿ ಸಿಲ್ವರ್ ಮತ್ತು ಬೀಟೆ ಮರದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ದಾಳಿ ನಡೆಸಿ ಮಾಲು ಸಮೇತ ವ್ಯಕ್ತಿಯೊಬ್ಬ ನನ್ನು ಬಂಧಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಅರಣ್ಯ ವ್ಯಾಪ್ತಿಗೆ ಒಳಪಡುವ ಆನೆ ಚೌಕೂರು ಗೇಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಸಿಲ್ವರ್ ಮರದ ತುಂಡುಗಳ ನಡುವೆ ಬೀಟೆ ಮರ ಇಟ್ಟು ಸಾಗಾಟ ನಡೆಸಲಾಗುತಿತು.ಮೈಸೂರಿನ ಹುಣಸೂರಿನ ಈರ ದಾಸಯ್ಯ ಕೊಪ್ಪಲ್ಲೂ ಗ್ರಾಮದ ದರ್ಶನ್ ಬಂಧಿತ ಆರೋಪಿಯಾಗಿದ್ದು, ಮರದ ಮಾಲೀಕ ವಿರಾಜಪೇಟೆ ನೆಹರೂ ನಗರ ನಿವಾಸಿ ಮೊಹಮದ್ ಇನಾಯತ್ ತಲೆಮಾರೆಸಿಕೊಂಡಿದ್ದಾನೆ.