ಇತ್ತೀಚಿನ ಸುದ್ದಿ
ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ
18/12/2025, 23:07
ಬೆಳಗಾವಿ(reporterkarnataka.com): ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಕೆಲಸಕ್ಕೆ ಎಂದು ಆಗಮಿಸುವ ವಲಸಿಗರ ಕಾರ್ಮಿಕರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದೆ, ಇದಕ್ಕೆ ಕಡಿವಾಣ ಹಾಕುವಂತೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಸದನದ ಗಮನ ಸೆಳೆದರು. ಕೊಡಗು ಜಿಲ್ಲೆಯಲ್ಲಿ ವಲಸಿಗ ಕಾರ್ಮಿಕರಿಂದ ಸಾಕಷ್ಟು ಕ್ರೈಂ ನಡೆದಿದ್ದು ಇದಕ್ಕೆ ಕಡಿವಾಣ ಆಗಬೇಕಿದೆ ಎಂದರು. ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಡಾ. ಪರಮೇಶ್ವರ್ ಕ್ರಮ ತೆಗೆದು ಕೊಂಡಿದ್ದೇವೆ ಎಂದರು.












