ಇತ್ತೀಚಿನ ಸುದ್ದಿ
ಇಳೆಯನ್ನು ತೊಯಿಸಿದ ಮುಂಗಾರು ಮಳೆ: ಭರ್ಜರಿ ಬಿತ್ತನೆ ಶುರು; ಮಂದಹಾಸ ಬೀರಿದ ರಾಯಚೂರು ರೈತರು
07/07/2021, 10:15
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಮುಂಗಾರು ಮಳೆ ಸಂಪೂರ್ಣವಾಗಿ ಆಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಸಂತೋಷ ಎದ್ದು ಕಾಣುತ್ತಿದೆ. ಮಸ್ಕಿ ಭಾಗದ ಮ್ಯಾದರಾಳ, ಅಂತರಗಂಗೆ, ಮೆದಿಕಿನಾಳ, ಬೈಲಗುಡ್ಡ, ನಾಗರಬೆಂಚಿ, ಸಂತೆಕೆಲ್ಲೂರು, ಅಂಕುಶದೊಡ್ಡಿ, ಹಾಲಾಪುರ, ಹಸಮಕಲ್ ಗ್ರಾಮಗಳಲ್ಲಿ ಸಂಪೂರ್ಣವಾಗಿ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆ ಚಟುವಟಿಕೆಯಲ್ಲಿ ಬಿತ್ತಿಗೆ ಮಾಡುವ ದೃಶ್ಯ ಕಂಡು ಬಂದಿದೆ. ಮ್ಯಾದರಾಳ ಗ್ರಾಮದ ರೈತ ಕಲಾವಿದ ಕವಿ ಸಣ್ಣ ಗೌಡಪ್ಪಗೌಡ ಬಿತ್ತಿಗೆ ಮಾಡುವ ದೃಶ್ಯ ಕಂಡಿತು.
ಈ ಭಾಗದ ರೈತರು ಸಂಪೂರ್ಣವಾಗಿ ಮಳೆಯಾಗಿರುವುದರಿಂದ ಈ ಬಾರಿ ತೊಗರಿ, ಸಜ್ಜಿ, ಸೂರ್ಯಕಾಂತಿಯನ್ನು ಜನ ಜಾಸ್ತಿ ಬಿತ್ತನೆಗೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಮುಂದಾದ ರೈತರ ಮೊಗದಲ್ಲಿ ಮಂದಹಾಸ ಚೆಲ್ಲಿದೆ. ರೈತರ ಪಾಲಿಗೆ ದಾರಿ ದೀಪವಾದ ಮಳೆರಾಯನಿಗೆ ಶರಣು ಶರಣಾರ್ಥಿ ಅರ್ಪಿಸಿದರು. ದೇವರನ್ನು ಸ್ಮರಿಸುವ ಸಂತೋಷದಲ್ಲಿ ಇರುವ ದೃಶ್ಯ ಕಂಡು
ಬಂತು.