11:25 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಐಡಿಯಲ್ ಪಬ್ಬಾಸ್ ನಲ್ಲಿ ಐಸ್ ಕ್ರೀಂ ಸವಿದ ಕಾಂಗ್ರೆಸ್ ಯುವರಾಜ!: ಗಡಬಡ್, ಚಾಕುಲೇಟ್ ಡ್ಯಾಡ್ ಗೆ ರಾಹುಲ್ ಫಿದಾ!!

28/04/2023, 15:30

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporter Karnataka@gmail.com

ಐಸ್ ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಅಬಾಲವೃದ್ದರ ವರೆಗೆ ಎಲ್ಲರೂ ಐಸ್ ಕ್ರೀಂ ಪ್ರಿಯರೇ. ಅದರಲ್ಲೂ ಕರಾವಳಿಯ ಮನೆ ಮಾತಾಗಿರುವ ಐಡಿಯಲ್ ಐಸ್ ಕ್ರೀಂ ಯಾರಿಗೆ ಬೇಡ ಹೇಳಿ?. ಐಡಿಯಲ್ ಅಂದ್ರೆ ಕರಾವಳಿ ಜನ ಮುಗಿ ಬೀಳ್ತಾರೆ. ಕ್ಯೂ ನಿಂತು ಐಸ್ ಕ್ರೀಂ ಮೆಲ್ಲುತ್ತಾರೆ. ಹಾಗೆ ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ಅವರು ಕೂಡ ಐಡಿಯಲ್ ಐಸ್ ಕ್ರೀಂಗೆ ಮನಸೋತಿದ್ದಾರೆ.
ರಾಹುಲ್ ಗಾಂಧಿ ನಿನ್ನೆ ಉಡುಪಿಗೆ ಆಗಮಿಸಿದ್ದರು. ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಮಂಗಳೂರಿಗೆ ಬಂದಿದ್ದಾರೆ. ಇದು ಅವರ ಎಲೆಕ್ಷನ್ ಟೂರ್. ಕಾಪುವಿನಲ್ಲಿ ಮೋಗವೀರ ಸಮುದಾಯದ ಜತೆ ಸಂವಾದ ನಡೆಸಿದ ಅವರು ಸಂಜೆ ಮಂಗಳೂರಿನ ಹೊರವಲಯದ ಅಡ್ಯಾರ್ ಸಮೀಪದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಕಾಂಗ್ರೆಸ್ ನ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ರಾತ್ರಿ ಅಲ್ಲಿಂದ ರಾಹುಲ್ ಅವರು ನಗರಕ್ಕೆ ಆಗಮಿಸಿ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ತೆರಳಿ ಐಸ್ ಕ್ರೀಮ್ ಸವಿದಿದ್ದಾರೆ. ಐಡಿಯಲ್ ಐಸ್ ಕ್ರೀಮ್ ಸ್ಪೆಷಲ್ ಆದ ಗಡಬಡ್, ಚಾಕುಲೇಟ್ ಡ್ಯಾಡ್, ಪಾನ್ ಐಸ್ ಕ್ರೀಂ, ಸಿರಾಮುಸ್ ಸೇರಿದಂತೆ ಹಲವು ಪ್ಲೆವರ್ ಗಳ ಐಸ್ ಕ್ರೀಂಗಳನ್ನು ಸೇವಿಸಿದರು. ಎಲ್ಲ ಐಸ್ ಕ್ರೀಂ ಗಳಿಗಿಂತ್ ಗಡಬಡ್ ಹಾಗೂ ಚಾಕಲೇಟ್ ಡ್ಯಾಡ್ರಾ ರಾಹುಲ್ ಅವರಿಗೆ ತುಂಬಾ ಇಷ್ಟವಾಯಿತು.ಎಂದು ಅವರ ಜತೆಗಿದ್ದ ಮುಖಂಡರರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮುಂತಾದವರು ಅವರ ಜತೆಗಿದ್ದರು. ರಾಹುಲ್ ಗಾಂಧಿ ಅವರ ಜತೆಗೆ ಸೆಲ್ಫಿಗಾಗಿ ಜನರು ಮುಗಿಬಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು