ಇತ್ತೀಚಿನ ಸುದ್ದಿ
ಐಸಿಎಸ್ ಇ ಬೋರ್ಡ್ 10ನೇ ತರಗತಿ ಪರೀಕ್ಷೆ: ಬಣಕಲ್ ನಜರತ್ ಶಾಲೆಗೆ ಸತತ 10ನೇ ವರ್ಷ ಶೇ. 100 ಫಲಿತಾಂಶ
18/07/2022, 08:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಐ.ಸಿ.ಎಸ್.ಇ ಬೋರ್ಡ್ ನ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು ಬಣಕಲ್ ನ ನಜರತ್ ಶಾಲೆ ಸತತ 10ನೇ ವರ್ಷವೂ ಶೇ. 100 ಫಲಿತಾಂಶ ಪಡೆದಿದೆ. ಪರೀಕ್ಷೆಯಲ್ಲಿ ಹಾಜರಾದ 35 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಪೂರ್ಣೇಶ್ ಮತ್ತಾವರ ಮತ್ತು ರೇಖಾ ಪೂರ್ಣೇಶ್ ರ ಪುತ್ರ ಸುಜ್ಞಾನ್ ಪಿ. ಶೇ. 97 ಅಂಕಗಳೊಂದಿಗೆ ಪ್ರಥಮ, ಪೌಲ್ಸನ್ ಮತ್ತು ವಲ್ಸಮ್ಮರವರ ಪುತ್ರಿ ಇಶಾನ ಎ.ಪೌಲ್ಸನ್ ಶೇ. 95 ಅಂಕಗಳೊಂದಿಗೆ ದ್ವಿತೀಯ ಹಾಗೂ ಸುಧಾಕರ್ ಮತ್ತು ಅರ್ಚನಾರವರ ಪುತ್ರ ಲವಣ್ ಎನ್.ಎಸ್. ಹಾಗೂ ರವಿ ಮತ್ತು ಶಶಿಕಲಾರವರ ಪುತ್ರ ಶ್ರೇಯಸ್ ಆರ್. ಶೇ. 94 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ಇವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.