ಇತ್ತೀಚಿನ ಸುದ್ದಿ
ನಾನು ಸ್ಪೀಕರ್, ನನಗೆ ನಾನೇ ಕಮಾಂಡರ್ ಎಂದ ಯು.ಟಿ. ಖಾದರ್ ವಿಧಾನಸೌಧದಲ್ಲಿ ಶ್ವಾನಗಳ ಕಾಟ ಬಗ್ಗೆ ಹೇಳಿದ್ದೇನು?
03/02/2025, 16:59
ಮಂಗಳೂರು(reporterkarnataka.com): ಈಗ ನಾನಿರುವ ಪೋಸ್ಟ್‌ನಲ್ಲಿ ಸಂತೋಷದಲ್ಲಿ ಇದ್ದೇನೆ. ಯಾವುದೇ ಅಧಿಕಾರ ಇಲ್ಲದೇ ಇದ್ರೂ ಸಂತೋಷದಲ್ಲಿ ಇರುತ್ತೇನೆ. ಈಗ ನಾನು ಸ್ಪೀಕರ್ ನನಗೆ ನಾನೇ ಕಮಾಂಡರ್ ಎಂದು ವಿಧಾನ ಸಭೆ ಸ್ಪೀಕರ್ ಯು .ಟಿ.ಖಾದರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ನರಿಂಗಾನದಲ್ಲಿ ನಡೆದ ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯು.ಟಿ.ಖಾದರ್ ಅವರಿಗೆ ಸ್ಪೀಕರ್ ಆಗೋದು ಇಷ್ಟವಿರಲಿಲ್ಲ ಎಂಬ ಹೇಳಿಕೆಯ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್, ನಾನೀಗ ಸರ್ಕಾರದಲ್ಲಿ ಇಲ್ಲ, ನನಗೆ ಏನು ನಡೆಯುತ್ತಿದೆ ಎಂದು ಗೊತ್ತಾಗಿಲ್ಲ ಎಂದರು.
ವಿಧಾನಸೌಧದಲ್ಲಿ ಶ್ವಾನಗಳ ಕಾಟಕ್ಕೆ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಅವರು ಮಾತನಾಡಿದರು.
ಸದ್ಯ ವಿಧಾನಸೌಧದಲ್ಲಿ ಶ್ವಾನಗಳ ಕಾಟ ಹೆಚ್ಚಾಗಿದ್ದು, ಒಮ್ಮೆಗೆ ವಿಧಾನಸೌಧದಿಂದ ಶಾಸಕರನ್ನಾದರೂ ಹೊರಹಾಕಬಹುದು, ಆದರೆ ಶ್ವಾನಗಳನ್ನು ಹೊರಹಾಕೋದೇ ಹೇಗೆ ಎಂದು ಸಮಸ್ಯೆಯಾಗಿದೆ. ಶ್ವಾನಗಳ ಪರವಿದ್ದವರು ಇದ್ದಾರೆ, ವಿರೋಧ ಇದ್ದವರು ಇದ್ದಾರೆ. ಆದ್ದರಿಂದ ಶ್ವಾನಗಳನ್ನು ಹೊರ ಹಾಕೋದಕ್ಕೆ ಸಭೆ ಕರೆದಿದ್ದೇನೆ. ಈ ಸಭೆಗೆ ಪ್ರಾಣಿ ದಯಾ ಸಂಘದವರನ್ನು ಕರೆಯುತ್ತೇವೆ ಎಂದು ಖಾದರ್ ನುಡಿದರು.