ಇತ್ತೀಚಿನ ಸುದ್ದಿ
ಹುಟ್ಟೂರಿನತ್ತ ಪ್ರವೀಣ್ ಪಾರ್ಥಿವ ಶರೀರ: ಕಟ್ಟೆಚ್ಚರ; ನಾಳೆ ಮಧ್ಯರಾತ್ರಿವರೆಗೆ ಸೆಕ್ಷನ್ 144 ಜಾರಿ
27/07/2022, 11:56
ಪುತ್ತೂರು(reporterkarnataka.com): ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಹಿನ್ನೆಲೆ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಈ ಮೂರು ತಾಲೂಕುಗಳಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ಜು.28 ರ ಮಧ್ಯರಾತ್ರಿ ವರೆಗೆ ಸೆಕ್ಷನ್ 144 ಜಾರಿಗೊಳಿಸಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಆದೇಶಿಸಿದ್ದಾರೆ.
ಈ ಮಧ್ಯೆ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ್ದು, ಹುಟ್ಟೂರಿನತ್ತ ಅಂಬುಲೆನ್ಸ್ ಮೂಲಕ ಪ್ರವೀಣ್ ಮೃತದೇಹ ಸಾಗಿಸಲಾಗುತ್ತಿದೆ.
ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಿಲ್ಲವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದೆ.