ಇತ್ತೀಚಿನ ಸುದ್ದಿ
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ ತಾಯಿ ಮಡಿಲಿಗೆ
02/12/2025, 12:20
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಮೈಸೂರಿನ ಹುಣಸೂರು ತಾಲ್ಲೂಕಿನ ಹನಗೋಡು, ಗೌಡಕಟ್ಟೆ ಗ್ರಾಮದ ಬಳಿ ಜನರಿಗೆ ಹೆದರಿ ಚದುರಿ ಹೋಗಿದ್ದ ನಾಲ್ಕು ಹುಲಿ ಮರಿಗಳನ್ನು ಪತ್ತೆ ಹಚ್ಚಿ ತಾಯಿ ಮಡಿಲು ಸೇರಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನಾಗರಹೊಳೆ ಉದ್ಯಾನದಂಚಿನ ಹುಣಸೂರು ತಾಲೂಕಿನ ಗುರುಪುರ ಬಳಿಯ ಗೌಡನ ಕಟ್ಟೆ ಜೋಳದ ಹೊಲದಲ್ಲಿ ರೈತರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಸುಮಾರು 10 ವರ್ಷದ ಹೆಣ್ಣು ಹುಲಿಯನ್ನು ಗುರುವಾರ ರಾತ್ರಿ ಸೆರೆ ಹಿಡಿದು ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿತ್ತು. ಇದೀಗ ನಾಲ್ಕು ಹುಲಿ ಮರಿಗಳನ್ನು ಪತ್ತೆ ಹಚ್ಚಲಾಗಿದ್ದು ಒಟ್ಟು 5 ಹುಲಿಗಳನ್ನು ನಗರಹೊಳೆಗೆ ಸಾಗಿಸಲಾಗಿದೆ.












