ಇತ್ತೀಚಿನ ಸುದ್ದಿ
ಹುಲಿ ದಾಳಿಗೆ ಹಸು ಬಲಿ: 5 ತಿಂಗಳ ಕರು ತಬ್ಬಲಿ; ಕಣ್ಣೀರಿಟ್ಟ ಮಲೆನಾಡಿನ ಜನ
17/06/2022, 21:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.ಆಲ್ದೂರು ಸಮೀಪದ ಕಂಚಿಕಲ್ ದುರ್ಗ ಮುಳ್ಳಯ್ಯ ಸ್ವಾಮಿ ಮಠಕ್ಕೆ ಸೇರಿದ ಮೇಯಲು ಹೋಗಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿದೆ. 5 ತಿಂಗಳ ಕರು ತಬ್ಬಲಿಯಾಗಿದೆ.
ಮಲೆನಾಡಿನ ಜನರು ಕಣ್ಣೀರಿಟ್ಟಿದ್ದಾರೆ.ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾವಳಿ ಅಧಿಕವಾಗಿದ್ದು ಅನೇಕ ಜಾನುವಾರುಗಳು ಮೃತಪಟ್ಟಿದ್ದು ,ಮೇಯಲು ದನಗಳನ್ನು ಬಿಡಲು ಜನ ಹೆದರುವಂತಾಗಿದೆ.














