ಇತ್ತೀಚಿನ ಸುದ್ದಿ
ಹುಲಿ ದಾಳಿಗೆ 3 ಹಸುಗಳು ಬಲಿ: ಕಾಫಿನಾಡಲ್ಲಿ ಮುಂದುವರೆದ ವ್ಯಾಘ್ರ ಅಟ್ಟಹಾಸ; ಕೈಕಟ್ಟಿ ಕುಳಿತ ಅರಣ್ಯ ಇಲಾಖೆ
26/11/2022, 21:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಭಾರತಿಬ್ಯೆಲು ಕನ್ನಗೆರೆ ಕಣ್ಣ ಕಾಫಿ ಎಸ್ಟೇಟ್ ನಲ್ಲಿ ಶುಕ್ರವಾರ ರಾತ್ರಿ ಸಮಯದಲ್ಲಿ ಹುಲಿ ಸುಮಾರು 4 ಹಸುಗಳನ್ನು ಬೇಟೆಯಾಡಿದ್ದು,ಇದರಲ್ಲಿ ಒಂದು ಕರು ಕೂಡ ಸೇರಿದೆ.
ಇವುಗಳಲ್ಲಿ ಒಂದು ಹಸು ಜೀವ ಉಳಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದೆ. ಇನ್ನೆರಡು ಹಸುಹಾಗು ಒಂದು ಕರು ಪ್ರಾಣ ಬಿಟ್ಟಿದ್ದು ಒಂದನ್ನು ಭಾಗಶಃ ತಿಂದು ಹಾಕಿದೆ.
ಅದರಲ್ಲಿ ಒಂದು ಹಸು ಗರ್ಭ ಧರಿಸಿದ್ದು ಹೊಟ್ಟೆಯಿಂದ ಕರವನ್ನು ಹೊರಹಾಕಿ ತಿಂದಿರುವ ಭಯಾನಕ ದೃಶ್ಯವನ್ನು ಗ್ರಾಮಸ್ಥರು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲವು ದಿವಸಗಳಿಂದ ಎರಡು ಹುಲಿಗಳು ಸಂಚರಿಸುತ್ತಿದ್ದು, ಅನೇಕ ಹಸುಗಳನ್ನು ಇದುವರೆಗೂ ಬೇಟೆಯಾಡಿರುವ ವರದಿಯಾಗಿದೆ.
ಕೂಡಲೇ ಜೀವಹಾನಿ ಸಂಭವಿಸುವ ಮುಂಚೆ ಈ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಗ್ರಹಿಸಿದ್ದಾರೆ.
ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.