ಇತ್ತೀಚಿನ ಸುದ್ದಿ
Housing Scheme | ಬಸವ ವಸತಿ ಯೋಜನೆ: ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ 12 ಕೋಟಿ ಬಿಡುಗಡೆ
12/03/2025, 23:44

ಬೆಂಗಳೂರು(reporterkarnataka.com):ಕುಮಟಾ ವಿಧಾನಸಭಾ ಕ್ಷೇತ್ರದದಲ್ಲಿ ಬಸವ ವಸತಿ ಯೋಜನೆಯಡಿ12 ಕೋಟಿ ಬಿಡುಗಡೆ ಮಾಡಲಾಗಿದ್ದು, ಅಗತ್ಯವಿರುವ ಸುಮಾರು 4 ಕೋಟಿ ರೂ.ಗಳ ಅನುದಾನವನ್ನು ಆದಷ್ಟು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.
ಇಂದು ವಿಧಾನಸಭೆಯ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ದಿನಕರ್ ಕೇಶವ ಶೆಟ್ಟಿ ಅವರ ಗಮನ ಸೆಳೆಯುವ ಸೂಚನೆಗೆ ವಸತಿ ಸಚಿವರ ಪರವಾಗಿ ಸಚಿವರು ಉತ್ತರ ನೀಡಿದರು.