11:01 PM Sunday21 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ಹೊಟೇಲ್ ವ್ಯವಹಾರದಲ್ಲಿ ನಷ್ಟ: ಬೈಕಾಡಿಯಲ್ಲಿ ಯುವ ಉದ್ಯಮಿ ಆತ್ಮಹತ್ಯೆ

10/05/2022, 23:39

ಬ್ರಹ್ಮಾವರ(reporterkarnataka.com): ಹೊಟೇಲ್ ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ಮನನೊಂದ ಯುವ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಕಾಡಿ ಗ್ರಾಮದ ಗಾಂಧಿ ನಗರ ಎಂಬಲ್ಲಿ ಸೋಮವಾರ ನಡೆದಿದೆ.

ಮೃತರನ್ನು ಗಾಂಧಿ ನಗರ ನಿವಾಸಿ ಪ್ರಭಾಕರ ಶೆಟ್ಟಿಗಾರ್ ಎಂಬವರ ಪುತ್ರ 
ಪೃಥ್ವಿರಾಜ್ (27) ಎಂದು ಗುರುತಿಸಲಾಗಿದೆ. ಇವರು ಸುಮಾರು ಒಂದೂವರೆ ವರ್ಷದ ಹಿಂದೆ ಹಾಸನದಲ್ಲಿ ಸುಮಾರು 14 ಲಕ್ಷ ಖರ್ಚು ಮಾಡಿ ಹೊಟೇಲ್ ವ್ಯವಹಾರ ಆರಂಭಿಸಿದ್ದರು. ಆದರೆ ಹೊಟೇಲ್ ವ್ಯವಹಾರದಲ್ಲಿ ನಷ್ಟ ಉಂಟಾಗಿ, ಕಳೆದ 6 ತಿಂಗಳಿಂದ ಮನೆಯಲ್ಲಿಯೇ ಇದ್ದು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರು.

ವ್ಯವಹಾರದಲ್ಲಿನ ನಷ್ಟದಿಂದ ಖಿನ್ನತೆಗೆ ಒಳಗಾಗಿ ಮನನೊಂದ ಇವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು