4:21 PM Tuesday15 - July 2025
ಬ್ರೇಕಿಂಗ್ ನ್ಯೂಸ್
ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ…

ಇತ್ತೀಚಿನ ಸುದ್ದಿ

ಹೊಸ ವರ್ಷ ಸ್ವಾಗತಕ್ಕೆ ಕಡಲನಗರಿ ಸಜ್ಜು: ಬೀಚ್ ಗಳಲ್ಲಿ ಜನಸಾಗರ, ಅಲ್ಲಲ್ಲಿ ವಿಶೇಷ ಕಾರ್ಯಕ್ರಮ, ದೇಗುಲ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ

31/12/2023, 22:08

ಮಂಗಳೂರು(reporterkarnataka.com): ಹೊಸ ವರ್ಷ 2024 ಬರಮಾಡಿಕೊಳ್ಳಲು ಕಡಲನಗರಿ ಮಂಗಳೂರು ಸಜ್ಜಾಗಿದೆ. ಜಾತಿ, ಧರ್ಮ, ಪ್ರಾಂತ್ಯ, ಭಾಷೆಯ ವೈರುಧ್ಯಗಳ ನಡುವೆ ತುಳುವರು ಹೊಸ ವರ್ಷಕ್ಕೆ ನಗುಮೊಗದಿಂದ ಸಿದ್ದರಾಗಿದ್ದಾರೆ.


ವರ್ಷದ ಕೊನೆಯ ದಿನ ಭಾನುವಾರ ಬಂದಿರುವುದರಿಂದ ಕರಾವಳಿಗರು ಫುಲ್ ಖುಷಿಯಲ್ಲಿದ್ದಾರೆ. ಜಿಲ್ಲೆಯ ಜನತೆ ಇಂದು ಬೆಳಗ್ಗೆಯೇ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಪೊಳಲಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಎಲ್ಲ ದೇಗುಲಗಳು ಇಂದು ಬೆಳಗ್ಗಿನಿಂದಲೇ ರಶ್ ಇತ್ತು. ಕಡಲನಗರಿಯ ಶರವು, ಮಂಗಳಾದೇವಿ. ಕುದ್ರೋಳಿ ದೇಗುಲಗಳಿಗೆ ಸಾಕಷ್ಟು ಜನರು ಧಾವಿಸಿ ದೇವರಿಗೆ ನಮಿಸಿ ಬಂದಿದ್ದಾರೆ.
ಸಂಜೆ 4 ಗಂಟೆ ಕಳೆಯುತ್ತಿದ್ದಂತೆ ಮಂಗಳೂರಿನ ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಉಳ್ಳಾಲ ಸೋಮೇಶ್ವರ ಬೀಚ್, ಸುರತ್ಕಲ್ ಎನ್ ಐಟಿಕೆ ಬೀಚ್, ಸಸಿಹಿತ್ಲು ಬೀಚ್ ಪ್ರವಾಸಿಗರಿಂದ ಮತ್ತು ವಿಹಾರಾರ್ಥಿಗಳಿಂದ ತುಂಬಿತ್ತು. ಪಣಂಬೂರು ಬೀಚ್ ನಲ್ಲಿ ಜನರ ಖುಷಿ ಕಳೆಗಟ್ಟಿತ್ತು. ಗಾಳಿಪಟ ಹಾರಾಟ, ಬೆಲೂನ್ ಹಾರಾಟ ನಡೆಯಿತು.



ದೇಗುಲಗಳ ಜತೆ ಚರ್ಚ್ ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಂಗಳೂರಿನ ಮಿಲಾಗ್ರಿಸ್ ಚರ್ಚ್,ವೆಲೆಂನ್ಸಿಯ ದೇರೆಬೈಲ್ ಚರ್ಚ್, ರೊಸಾರಿಯೊ ಚರ್ಚ್, ಬಿಜೈ ಚರ್ಚ್, ಸೈಂಟ್ ಸೆಬಾಸ್ಟಿಯನ್ ಚರ್ಚ್ ಸೇರಿದಂತೆ ಎಲ್ಲ ಚರ್ಚ್ ಗಳಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು