ಇತ್ತೀಚಿನ ಸುದ್ದಿ
ಮೂಡಿಗೆರೆಯಲ್ಲಿ ಭಯಾನಕ ಅಪಘಾತ | ಬೈಕ್ ಮೇಲೇರಿದ ಕ್ರೇನ್: ಮಹಿಳೆ ಸ್ಥಳದಲ್ಲೇ ಸಾವು; ಇನ್ನೊಬ್ಬರು ಗಂಭೀರ
08/10/2025, 19:23

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನಿಯಂತ್ರಣ ತಪ್ಪಿ ಕ್ರೇನ್ ಟಯರ್ ಬೈಕ್ ಮೇಲೆ ಹತ್ತಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ಪಟ್ಟಣದ ಸಂತೆ ಮೈದಾನದ ಬಳಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಅಂಗನವಾಡಿ ಸಿಬ್ಬಂದಿ ಸುಪ್ರಿತಾ (26) ಎಂದು ಗುರುತಿಸಲಾಗಿದೆ. ಕ್ರೇನ್ ಬೈಕಿಗೆ ಡಿಕ್ಕಿ ಹೊಡೆದು
ಬೈಕ್ ಹಾಗೂ ಮಹಿಳೆಯ ಮೇಲೆ ಹತ್ತಿದೆ. ಇದರಿಂದ
ಸುಪ್ರಿತಾ ಅವರು ಸ್ಥಳದಲ್ಲೇ ಸಾವು, ಮತ್ತೋರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
ಜಲಜೀವನ್ ಮಿಷನ್ ಕಾಮಗಾರಿಗೆ ಕ್ರೇನ್ ಬಂದಿತ್ತು.
ಮೂಡಿಗೆರೆ ಪಟ್ಟಣದಿಂದ ಹೆಸ್ಗಲ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಗಾಗಿ ಕ್ರೇನ್ ತರಿಸಲಾಗಿತ್ತು.
ಕ್ರೇನ್ ಬ್ರೇಕ್ ಫೇಲ್ ಆಗಿತ್ತೇ ಅಥವಾ ಚಾಲಕನ ಅಜಾಗರೂಕತೆಯೇ ಎನ್ನುವ ಬಗ್ಗೆ ಪೊಲೀಸರ ತನಿಖೆ ನಡೆಯಬೇಕಿದೆ.