4:56 AM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಹೊರಡುವುದು ಕಾಲೇಜಿಗೆ: ಸುತ್ತುವುದು ಪಾರ್ಕ್, ಗಲ್ಲಿ: ಹೆತ್ತವರು ಎಚ್ಚೆತ್ತುಕೊಳ್ಳುವುದು ಅಗತ್ಯ

02/12/2021, 08:39

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಕಾಲೇಜಿಗೆ ಹೋಗುತ್ತೇವೆ ಎಂದು ಮನೆಯಿಂದ ಹೊರಡುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಬದಲು ಪಾರ್ಕಿನಲ್ಲಿ ಹಾಗೂ ಗಲ್ಲಿ ರಸ್ತೆಗಳಲ್ಲಿ ಕಾಲಾಹರಣ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹೊಡೆದು ನಗರದ ಹೊರವಲಯದಲ್ಲಿ ಸಾಲು ಮರದ ತಿಮ್ಮಕ್ಕ ಪಾರ್ಕ್, ಸರಕಾರಿ ಪದವಿ ಪೂರ್ವ ಕಾಲೇಜ್ ಹಿಂಭಾಗದ ಬಂಡೆಗಳ ಮೇಲೆ, ಪಾಳು ಬಿದ್ದ ಕನಕ ಭವನ, ಬೋವಿ ಸಮುದಾದ ಭವನ, ಕೈಲಾಸ್ ಗ್ಯಾಸ್ ರಸ್ತೆಯ ನಗರಸಭೆಯ ವಸತಿ ಗೃಹಗಳರಸ್ತೆ, ರವೀಂದ್ರ ಕಾಲೇಜ್ ರಸ್ತೆ, ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕಾಲೇಜಿಗೆ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹರಟೆ ಹೊಡೆಯುವುದು, ಮೊಬೈಲ್ ನಲ್ಲಿ ಮಾತಾಡುವುದು ಇನ್ನು ಕೆಲ ಯುವಕರು ಬೈಕ್ ನಲ್ಲಿ ಬಂದು ವಿದ್ಯಾರ್ಥಿನಿಯರನ್ನು ಬಲವಂತಾಗಿ ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುವ ಪ್ರಕರಣಗಳು ರಾಜಾರೋಷವಾಗಿ ಸಾರ್ವಜನಿಕ ಸ್ಥಳಲ್ಲಿ ಯಾವುದೇ ಅಜಿಂಕೆಯಿಲ್ಲದೆ ನಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಚಿತ್ರದುರ್ಗ ರಸ್ತೆಯ ಅಕ್ಕ ಪಕ್ಕ ಸರಕಾರಿ ಪದವಿಪೂರ್ವ, ಪದವಿ  ಕಾಲೇಜುಗಳಿದ್ದು ಕಾಲೇಜಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಡುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಬದಲು ಕಾಲೇಜು ಬ್ಯಾಗ್ ಊಟದ ಬಾಕ್ಸ್ ಗಳ ಸಮೇತ ನೇರವಾಗಿ ತಮ್ಮ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್‍ಗಳ ಜೊತೆ ರೋಮೆನ್ಸ್ ಮಾಡಲು ಹೋಗುತ್ತಾರೆ. 

ನಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ಗ್ರಾಮದಲ್ಲಿರುವ ಶಾಲಾ ಕಾಲೇಜುಗಳನ್ನು ಬಿಟ್ಟು ಸಾಲಾ ಸೂಲ ಮಾಡಿ ಶುಲ್ಕ ಕಟ್ಟಿ ನಗರದಲ್ಲಿರುವ ಶಾಲೆಗಳಿಗೆ ಸೇರಿಸಿಸುತ್ತಾರೆ. ವ್ಯಾಸಂಗ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಎಲ್ಲವನ್ನು ಮರೆತು ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮದ ಬಲೆಗೆ ಬಿದ್ದು ಕಾಲೇಜಿಗೆಂದು ಬರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹಾಕಿ ಇನ್ನಿತರ ಪ್ರದೇಶಗಳಲ್ಲಿ ಅಲೆದಾಡುವುದೇ ಹೆಚ್ಚಾಗಿದೆ. ಮನೆಯವರು ತಮ್ಮ ಮಕ್ಕಳು ಕಾಲೇಜಿಗೆ ಹೋಗಿದ್ದಾರೆ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ ಎಂದು ಭಾವಿಸಿ ಪ್ರೀತಿಯಿಂದ ಕಳುಹಿಸಿ ಕೊಟ್ಟರೆ ಕಾಲೇಜಿಗೆ ಹೋಗದೆ ಪಾರ್ಕ್ ಸಿನಿಮಾ ಎಂದು ಸುತ್ತಾಡಿ ಶಾಲಾ ಕಾಲೇಜು ಬಿಡುವ ಸಮಯಕ್ಕೆ ಊರಿನತ್ತ ಪ್ರಯಾಣ ಬೆಳೆಸುತ್ತಾರೆ.

ರೋಡ್ ರೋಮಿಯೋಗಳಿಗೆ ಬುದ್ದಿಕಲಿಸಲು ಪೊಲೀಸ್ ಇಲಾಖೆಯಿಂದ ಓಬವ್ವ ಪಡೆ ರಚಿಸಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿ ಪ್ರಚಾರ ಮಾಡುತ್ತ ಶಾಲಾ ಕಾಲೇಜ್, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತುತಿರುಗುತ್ತಿದ್ದ ಓಬವ್ವ ಪಡೆ ಸದ್ದಿಲ್ಲದೆ ಮರೆಯಾಗಿರುವುದರಿಂದ ರೋಡ್ ರೋಮಿಯಗಳ ಬಲೆಗೆ  ಬಲಿಯಾಗಿ ಯುವಕ ಯುವತಿಯರ ಮಿಸ್ಸಿಂಗ್ ಪ್ರಕರಣಗಳು ಹೆಚ್ಚಾಗ ತೊಡಗಿವೆ.

 ಪ್ರೌಢಶಾಲಾ ಹಾಗೂ ಕಾಲೇಜಿಗಳಲ್ಲಿ ವಿದ್ಯಾರ್ಥಿ / ವಿದ್ಯಾರ್ಥಿನಿಯರ ಹಾಜರಾತಿ ಸಂಖ್ಯೆ ಕಡಿಮೆಯಾಗಿದ್ದು ಇದು ಶಿಕ್ಷಕರ ಹಾಗೂ ಉಪನ್ಯಾಸಕರಿಗೆ ತಲೆಬಿಸಿಯಾಗಿ ಪರಿಣಮಿಸಿದೆ ಕಾಲೇಜಿನ ಸುತ್ತ ಮುತ್ತ ವಿದ್ಯಾರ್ಥಿಗಳ ರೋಮೆನ್ಸ್ ಕಂಡು ಪ್ರಾಚರ್ಯರೊಬ್ಬರು ಪೊಲೀಸ್ ಇಲಾಖೆ ಪತ್ರ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಶಾಲಾ ಕಾಲೇಜ್ ಪ್ರಾರಂಭ ಹಾಗೂ ಬಿಡುವಾಗ , ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಗಸ್ತು ಮಾಡದೆ ಇರುವುದೇ ರೋಡ್ ರೋಮಿಯೋಗಳಿಗೆ ವರದಾನವಾಗಿದ್ದು ಓಬವ್ವನ ನಾಡಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು ಈಗಲಾದರೂ ಸಂಬಂಧ ಪಟ್ಟ ಇಲಾಖೆ ಗಸ್ತು ಮಾಡುವರೆ ಕಾದು ನೋಡ ಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು