ಇತ್ತೀಚಿನ ಸುದ್ದಿ
HM Promise | ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕ ರೂಪದ ದರ ನಿಗದಿ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭರವಸೆ
06/03/2025, 23:16

ಬೆಂಗಳೂರು (reporterkarnataka.com) : ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಏಕ ರೂಪದ ದರವನ್ನು ಅದಷ್ಟು ಶೀಘ್ರವಾಗಿ ಜಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಭರವಸೆ ನೀಡಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಮಾನ್ಯ ಸಚಿವರು, 2017-18ನೇ ಸಾಲಿನ ಆಯವ್ಯಯದಲ್ಲಿ ಎಲ್ಲಾ ಚಿತ್ರಮಂದಿರಗಳನ್ನು ಏಕ ರೂಪದ ದರ ಜಾರಿ ಮಾಡಲು ಘೋಷಣೆ ಮಾಡಲಾಗಿತ್ತು. ಆಯವ್ಯಯದ ಘೋಷಣೆಯಂತೆ 2018, ಮೇ 11ರಂದು ಸರ್ಕಾರದ ಆದೇಶವೂ ಸಹ ಆಗಿತ್ತು. ಆದರೆ ಆ ಸರ್ಕಾರಿ ಆದೇಶಕ್ಕೆ ತಡೆಯಾಜ್ಞೆ ತಂದ ನಿಟ್ಟಿನಲ್ಲಿ ಆದೇಶವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ಚಿತ್ರಮಂದಿರಗಳ ಟಿಕೇಟ್ ದರಗಳನ್ನು ಚಿತ್ರಮಮದಿರಗಳ ಮಾಲೀಕರೇ ನಿರ್ಧಾರ ಮಾಡುವ ಪದ್ದತಿ ಜಾರಿಯಲ್ಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳ ಮಾಲಿಕರು ಚಿತ್ರಮಂದಿಗಳನ್ನು ವಾಣಿಜ್ಯ ಚಟುವಟಿಕೆಗಳಾಗಿ ರೂಪಿಸಿಕೊಂಡಿದ್ದಾರೆ. ಆವಶ್ಯವೆನಿಸಿದಲ್ಲಿ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಈ ಸಮಬಂಧ ಕೂಡಲೇ ಅಗತ್ಯ ನಿಯಮಗಳನ್ನು ರೂಪಿಸಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ ಮಾಡಲು ಆದಷ್ಟು ಬೇಗ ಕ್ರಮ ವಹಿಸಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.