ಇತ್ತೀಚಿನ ಸುದ್ದಿ
ಐತಿಹಾಸಿಕ ಗುಜ್ಜರಕೆರೆ ತೀರ್ಥ ಪಾವಿತ್ರ್ಯ ರಕ್ಷಣೆಗೆ ಜಿಲ್ಲಾಧಿಕಾರಿಗೆ ಸಂರಕ್ಷಣಾ ವೇದಿಕೆ ಮನವಿ
17/07/2024, 15:09

ಮಂಗಳೂರು(reporterkarnataka.com): ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವುಳ್ಳ ನಗರದ ಗುಜ್ಜರಕೆರೆಯ ಮಧ್ಯ ಭಾಗದಲ್ಲಿ ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಿಯ ತೀರ್ಥ ಸ್ನಾನಕ್ಕೆ ಸಂಬಂಧಪಟ್ಟ ಕಾರ್ಯಗಳು, ಕೆರೆಯ ಈಶಾನ್ಯ ಭಾಗದಲ್ಲಿ ಗೋಮುಖ ತೀರ್ಥ ನಿರ್ಮಾಣ ಮತ್ತು ಕೆರೆಯ ನೀರಿನ ಶುದ್ಧತೆ ಬಗ್ಗೆ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ. ನೇಮು ಕೊಟ್ಟಾರಿ ಗುಜ್ಜರಕೆರೆ, ಜೊತೆ ಕಾರ್ಯದರ್ಶಿ ಹಾಗೂ ಮಾಜಿ ಕಾರ್ಪೊರೇಟರ್ ಮುರುಳೀಧರ ಬೋಳಾರ ಮತ್ತು ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬಿ. ಉಪಸ್ಥಿತರಿದ್ದರು.