1:58 PM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಹಿರಿಯಡ್ಕ: ಸೆಪ್ಟೆಂಬರ್ 7ರಂದು ‘ಸಪ್ತಪದಿ’ ವಧು–ವರ ಅನ್ವೇಷಣೆ – 2025

04/09/2025, 12:51

ಹಿರಿಯಡ್ಕ(reporterkarnataka.com): ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಹಿರಿಯಡ್ಕ ಇವರ ಮುಂದಾಳತ್ವದಲ್ಲಿ, RSB & BGSB ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ಇವರ ಆಯೋಜನೆಯಲ್ಲಿ “ಸಪ್ತಪದಿ ವಧು–ವರ ಅನ್ವೇಷಣೆ – 2025” ಕಾರ್ಯಕ್ರಮವು ಸೆಪ್ಟೆಂಬರ್ 7ರಂದು ಬೆಳಗ್ಗೆ 9 ಗಂಟೆಯಿಂದ ಹಿರಿಯಡ್ಕ ಓಂತಿಬೆಟ್ಟುನ
ಶಿವಪುರ ಸುಬ್ಬಣ್ಣನಾಯಕ್ ಸಾರಸ್ವತ ಸಭಾ ಭವನ ನಡೆಯಲಿದೆ.
ಸಮಾಜದ ವಿವಾಹಾಪೇಕ್ಷಿ ವಧು–ವರರಿಗೆ ಪರಸ್ಪರ ಪರಿಚಯ ಹಾಗೂ ಮಾಹಿತಿಗಳ ವಿನಿಮಯಕ್ಕಾಗಿ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ನೋಂದಾವಣಾ ಅರ್ಜಿ 2 ಪ್ರತಿಗಳು ಹಾಗೂ 2 postcard ಗಾತ್ರದ ಭಾವಚಿತ್ರಗಳನ್ನು ಸಲ್ಲಿಸುವುದು ಕಡ್ಡಾಯ. ವಧು–ವರರ ಪೋಷಕರು ಕಡ್ಡಾಯವಾಗಿ ಹಾಜರಿರಬೇಕೆಂದು ಸಂಘದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಹಾ, ತಿಂಡಿ ಹಾಗೂ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರು:
– ಪ್ರತಿಮಾ ಪ್ರಭು ಕೋಂಟು – 9480566541

– ಮೋಹನ್ ನಾಯಕ್ ಶಿವಮೊಗ್ಗ – 9482736447
– ಶಿವರಾಮ್ ಪ್ರಭು ಆತ್ರಾಡಿ – 9448724073
– ಸುನೀಲ್ ಬೋರ್ಕರ್ ಪುತ್ತೂರು – 9686914639
– ಸರೋಜಿನಿ ಪ್ರಭು ಕೋಡಿಬೆಟ್ಟು – 9663394650
– ಎಂ.ಡಿ. ಪ್ರಭು ಬೆಂಗಳೂರು – 7019976058
– ಹರಿದಾಸ್ ಕಾಮತ್ ಕಾಂಥರಗುಂಡಿ – 9481748552
– ಶ್ರೀನಿಧಿ ಓಂತಿಬೆಟ್ಟು – 8277403845
– ಮೇಘ ನಾಗರಾಜ್ ನಾಯಕ್ ಕಾಜರಗುತ್ತು – 7676822949
ಭಾಗವಹಿಸುವವರು ಫೋಟೋ ಹೊಂದಿರುವ ಬಯೋಡೇಟಾವನ್ನು ನೋಂದಾವಣಾ ಅಧಿಕಾರಿಗಳಿಗೆ WhatsApp ಮುಖಾಂತರ ಕಳುಹಿಸಿ ನೋಂದಾವಣೆ ಖಚಿತಪಡಿಸಿಕೊಳ್ಳಬೇಕು. ನೋಂದಾವಣೆಯನ್ನು ಪರಿಚಿತ ಅಧಿಕಾರಿಯ ಮೂಲಕವೇ ಮಾಡಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಕರೆ ಮಾಡುವ ಅವಶ್ಯಕತೆಯಿಲ್ಲ ಎಂದು ಹಿರಿಯಡ್ಕ ರಾಜಾಪುರ ಸಾರಸ್ವತ ಬ್ರಾಹ್ಮಣಸಂಘ ಪ್ರಕಟಣೆಯಲ್ಲಿ ತಿಳಿಸಿದೆ

ಇತ್ತೀಚಿನ ಸುದ್ದಿ

ಜಾಹೀರಾತು