7:06 PM Monday24 - November 2025
ಬ್ರೇಕಿಂಗ್ ನ್ಯೂಸ್
ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ… ಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಸಿಎಂ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

24/11/2025, 19:05

ಮೈಸೂರು(reporterkarnataka.com): ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ. ಭಾರತದ ಮೇಲೆ ಕೇವಲ ಭೂಮಿ ಮತ್ತು ಸಂಪತ್ತಿಗಾಗಿ ದಾಳಿ ನಡೆಯಲಿಲ್ಲ. ಇಲ್ಲಿನ ಸಂಸ್ಕೃತಿ ಮೇಲೆ ದಾಳಿ ಮಾಡಿದರು. ಆದರೆ, ಸ್ವಾಮಿ ವಿವೇಕಾನಂದರಂತಹ ನೂರಾರು ಸಂತರು ಈ ದೇಶವನು ಉಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಯುಗಕ್ಕೆ ಒಂದು ಸರಿ ನೋಡಬಹುದು. ಅವರು ಎಲ್ಲ ವಿಚಾರಗಳಿಗೆ ಉತ್ತರವಾಗಿದ್ದರು. ಅವರು ಬಹಳ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ವಿಚಾರಗಳನ್ನು ತಿಳಿಸಿ ಹೋಗಿದ್ದಾರೆ. ಅವರ ವಿಚಾರ ಧಾರೆಯ ಈ ಆಶ್ರಮ ನೂರು ವರ್ಷ ಮೈಸೂರು ನಾಡಿನಲ್ಲಿ ಅಬಾಧಿತವಾದ ಸೇವೆ ಸಲ್ಲಿಸಿರುವುದು ಅಭೂತಪೂರ್ವ ಸಾಧನೆ. ಈ ಆಶ್ರಮ ಯಾರು ಪ್ರಾರಂಭ ಮಾಡಬೇಕೆಂದು ತೀರ್ಮಾನ ಮಾಡಿದರೋ ಅವರಿಗೆ ನನ್ನ ಮೊದಲ ನಮಸ್ಕಾರ, ಯಾವ ಗಳಿಗೆಗೆ ಆ ಆಲೋಚನೆ ಬಂತೊ ಆ ಗಳಿಗೆಗೆ ನನ್ನ ನಮಸ್ಕಾರ. ಆ ಕ್ಷಣ ಇಡಿ ಜಗತ್ತಿಗೆ ಎಷ್ಟು ದೊಡ್ಡ ಊರ್ಜಾ ಕೊಟ್ಟಿದೆ. ಹುಟ್ಟು ಮತ್ತು ಸಾವಿನ ನಡುವಿರುವ ಬದುಕಿನ ಉದ್ದೇಶ ತಿಳಿಯುವುದು, ಸುಖವಾಗಿರುವುದೇ ನಮ್ಮ ಉದ್ದೇಶ ಅಂತ ತಿಳಿದುಕೊಂಡಿದ್ದೇವೆ. ಮನುಷ್ಯ ಯಾವತ್ತೂ ಸುಖವಾಗಿ ಇರಲು ಸಾಧ್ಯವಿಲ್ಲ. ಅದರ ಮೇಲೆ ವಿಜಯ ಸಾಧಿಸಲು ಸಾಧನೆ ಮಾಡಬೇಕಿದೆ. ಜೀವನದ ಉದ್ದೇಶವನ್ನು ಜ್ಞಾನಾರ್ಜನೆಗೆ ಮೀಸಲಿಟ್ಟರೆ ಸುಖ ಸಾಧಿಸಲು ಸಾಧ್ಯ ಎಂದು ವಿವೆಕಾನಂದರು ಹೇಳಿದ್ದಾರೆ ಎಂದು ಹೇಳಿದರು.


ಸ್ವಾಮಿ ವಿವೇಕಾನಂದರು ಎರಡು ವಿಚಾರ ಹೇಳಿದ್ದಾರೆ. ಜ್ಞಾನ ಮತ್ತು ಧ್ಯಾನದಲ್ಲಿ ಯಾರು ಪರಿಪೂರ್ಣತೆ ಕಾಣುತ್ತಾರೆ ಅವರು ದೇವರನ್ನು ಕಾಣುವ ಸನ್ಮಾರ್ಗ ಕಾಣುತ್ತಾರೆ. ಸನ್ಮಾರ್ಗಕ್ಕೆ ಹೋಗುವ ವಾಹನ ಧರ್ಮ. ಧರ್ಮ ಸತ್ಯದಿಂದ ಕೂಡಿದೆ ಮತ್ತು ಮಾನವೀಯತೆಯಿಂದ ಕೂಡಿದೆ. ಇವೆರಡೂ ಕೂಡ ಭಗವಂತ ನಮ್ಮನ್ನು ಸೃಷ್ಟಿ ಮಾಡಿರುವ ಉದ್ದೇಶ, ಆದ್ದರಿಂದ ಇವತ್ತು ಧರ್ಮದಿಂದ ಸತ್ಕಾರ್ಯ ಮಾಡಿ, ಬುದ್ದಿಯಿಂದ ಸನ್ಮಾರ್ಗ ಕಂಡುಕೊಂಡರೆ ನಾವು ಭಗವಂತನನ್ನು ಕಾಣಬಹುದು. ದೇವರು ಎಲ್ಲ ಕಡೆ ಇದ್ದಾನೆ. ಆದರೆ, ನೋಡುವಂತ ಕಣ್ಣು ನಮ್ಮಲ್ಲಿ ಇಲ್ಲ. ಕಣ್ಣಿದು ಕುರುಡರಿದ್ದೇವೆ. ಒಳಗಣ್ಣು ತೆರೆವಾಗ ಭಗವಂತ ಎಲ್ಲರಿಗೂ ಕಾಣಿಸುತ್ತಾರೆ. ಯಾರು ಮಹಾತ್ಮರು ಎಂದರೆ ಎಲ್ಲ ಮನುಷ್ಯರಲ್ಲಿ ಪರಮಾನತ್ಮನನ್ನು ಕಾಣುವವನೇ ಮಹಾತ್ಮ ಎಂದು ವಿವೇಕಾನಂದರು ಹೇಳಿದ್ದಾರೆ. ಹಂಗಂತ ಕೃತಕರಾಗಿ ಮಹಾತ್ಮರಾಗಲು ಬಯಸಬಾರದು ನೈಜವಾಗಿ ಎಲ್ಲದರಲ್ಲಿಯೂ ಪರಮಾತ್ಮರನ್ನು ಕಂಡರೆ ನಮ್ಮಷ್ಟಕ್ಕೆ ನಾವೇ ಮೇಲೆ ಎತ್ತರಕ್ಕೆ ಹೋಗಲು ಸಾಧ್ಯ ಇದೆ. ಆದ್ದರಿಂದ ಭಗವಂತ ನಮಗೆ ಏನು ಗುರುತು ಕೊಟ್ಟಿದ್ದಾನೆ. ಅದು ಒಂದು ಉದ್ದೇಶಕ್ಕೆ ಇದೆ. ನಾವು ಇನ್ನೊಬ್ಬರಾಗಲು ಹೋಗಬಾರದು. ಅದು ದೇವರ ಆಸೆಯಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮೋದಿ. ಇನ್ನೊಬ್ಬರು ಮೋದಿಯಾಗಲು ಸಾಧ್ಯವಿಲ್ಲ. ಅದು ಮುರ್ಖತನದ ಪರಮಾವಧಿಯಾಗುತ್ತದೆ ಎಂದು ಹೇಳಿದರು.

*ಬುದ್ದಿ ಮನಸ್ಸು ಒಂದಾದಾಗ ಅಮೃತ ಗಳಿಗೆ:*
ನಮ್ಮ ಮನಸ್ಸಿನಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಬುದ್ದಿ ಒಂದು ಹೇಳಿದರೆ ಮನಸ್ಸು ಇನ್ನೊಂದು ಹೇಳುತ್ತದೆ. ಬುದ್ದಿ ಮತ್ತು ಮನಸ್ಸನ್ನು ಯಾವಾಗ ಒಂದುಗೂಡಿಸುತ್ತೇವೆಯೇ ಅದೇ ಅಮೃತಗಳಿಗೆ ಮನಸ್ಸು ಮತ್ತು ಹೃದಯ ಒಂದಾದಾಗ ಅಮೃತ ಘಳಿಗೆಯಾಗುತ್ತದೆ. ದೇವರು ಮನುಷ್ಯನಿಗೆ ಕೆಲವೊಂದು ಕೊಟ್ಟು ಕೆಲವೊಂದು ನಮಗೆ ಬಿಟ್ಟಿದ್ದಾನೆ. ಸ್ವಾಮಿ ವಿವೇಕಾನಂದರು ಯಾರಿಗೂ ಹೆದರಬಾರದು ಎಂದು ಹೇಳಿದ್ದಾರೆ. ಭಯ ಇದ್ದರೆ ಆತ್ಮಸಾಕಿಯಿಂದ ಬದುಕಲು ಸಾಧ್ಯವಿಲ್ಲ. ಸತ್ಯ ಎಲ್ಲಿದೆ ಅಲ್ಲಿ ಭಯ ಇಲ್ಲ. ಸತ್ಯಕ್ಕೆ ಭಯ ಇಲ್ಲ. ಸತ್ಯಕ್ಕೆ ಗೆಳೆಯರಿಲ್ಲ. ಸುಳ್ಳಿಗೆ ಗೆಳೆಯರಿದ್ದಾರೆ. ಆದರೆ, ಭಯ ಇದೆ. ವಿವೇಕಾನಂದರು ನಮ್ಮನ್ನು ಏಕಾತ್ಮದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಸತ್ಯ ಯುಗಕ್ಕೆ ಸ್ವಾಮಿ ವಿವೇಕಾನಂದರು ಕರೆದುಕೊಂಡು ಹೋಗುತ್ತಾರೆ. ಸಾಧಕರ ಬಗ್ಗೆ ವಿವೇಕಾನಂದರು ಬಹಳ ಅದ್ಭುತವಾದ ಮಾತು ಹೇಳಿದ್ದಾರೆ. ನಾನು ಸಣ್ಣವನಿದ್ದಾಗ ಸ್ವಾಮಿ ವಿವೇಕಾನಂದರು ಬರೆದಿರುವ ಲೈಫ್ ಆಫ್ ಆಪ್ಟರ್ ಡೆತ್ ಪುಸ್ತಕ ತೆಗೆದುಕೊಂಡು ಎರಡು ಮೂರು ಬಾರಿ ಓದಿದೆ. ಅದನ್ನು ಓದಿದಾಗ ತಲೆನೋವು ಬರುತ್ತಿದೆ ಅಂತ ನನ್ನ ತಾಯಿಗೆ ಹೇಳಿದೆ. ಅವರು ನೀನು ಇನ್ನೂ ಸಣ್ಣವನಿದ್ದಿಯಾ ದೊಡ್ಡವನಾದ ಮೇಲೆ ಓದು ಆಗ ಅರ್ಥ ಆಗುತ್ತದೆ ಅಂತ ಹೇಳಿದರು. ದೊಡ್ಡವನಾದ ಮೇಲೆ ಓದಿದೆ ಅರ್ಥ ಆಯ್ತು. ಅದರ ತಾತ್ಪರ್ಯ ಇಷ್ಟೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರ ಬದುಕುವವನು ಸಾಧಕ ಎಂದು ಹೇಳಿದ್ದಾರೆ ಎಂದರು.

*ಸಂಸ್ಕೃತಿ ಮೇಲೆ ದಾಳಿ:*
ಇವತ್ತು ಸಮಾಜದಲ್ಲಿ ಬಹಳಷ್ಟು ಗೊಂದಲ ಸೃಷ್ಟಿಯಾಗಿದೆ. ಇಡೀ ಜಗತ್ತಿನಲ್ಲಿ ಗೊಂದಲ ಸೃಷ್ಟಿಯಾಗಿದೆ ಮಾನವನ ಮನಸ್ಸು ಬಹಳ ಕಲುಷಿತವಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಧರ್ಮ ಎಲ್ಲರನ್ನು ಕೂಡಿಸಬೇಕು. ಆದರೆ, ಧರ್ಮ ಎಲ್ಲರನ್ನು ಬೇರ್ಪಡಿಸುತ್ತಿದೆ. ಸ್ವಾಮಿವಿವೇಕಾನಂದರು ಧರ್ಮದ ಬಗ್ಗೆ ಸಷ್ಟವಾಗಿ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ನೀನು ಬದುಕಿರುವ ಭೂಮಿಯನ್ನು ಪ್ರೀತಿಸು ಅಂತ ಹೇಳಿದ್ದಾರೆ. ಧರ್ಮ ಮತ್ತು ದೇಶದ ಬಗ್ಗೆ ಸಂಬಂಧ ಅಲ್ಲಿಂದ ಶುರುವಾಗುತ್ತದೆ. ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೆ ನಮ್ಮ ಭಾರತ ದೇಶದ ಪರಿಸ್ಥಿತಿ ನೋಡಿದಾಗ ವಯಕ್ತಿಕವಾಗಿ ಎಲ್ಲರೂ ಬುದ್ದಿವಂತರಿದ್ದೇವೆ. ನಮಗೆ ಬಹಳ ಗೊಂದಲದ ಚರಿತ್ರೆ ಇದೆ. ಬೇರೆ ದೇಶದಲ್ಲಿ ದೊಡ್ಡ ಯುದ್ಧಗಳಾದರೂ ಯಾವುದೇ ಸಂಸ್ಕೃತಿ, ಧರ್ಮ ಬದಲಾಗಲಿಲ್ಲ. ಆದರೆ, ಇಲ್ಲಿ ಕೇವಲ ಭೂಮಿಗಾಗಿ, ಸಂಪತ್ತಿಗಾಗಿ ದಾಳಿ ನಡೆಯಲಿಲ್ಲ. ಇಲ್ಲಿ ಸಂಸ್ಕೃತಿ ಮೇಲೆ ದಾಳಿ ಮಾಡಿದರು. ಏಕೆಂದರೆ ಈ ಧರ್ಮದ ಬೇರುಗಳು ಅಷ್ಟು ಆಳವಾಗಿರುವುದರಿಂದ ಎಲ್ಲೆಡೆ ಪಸರಿಸುತ್ತವೆ ಎಂದು ದಾಳಿ ಮಾಡಿದರು. ಆದರೆ, ಸ್ವಾಮಿ ವಿವೇಕಾನಂದನಂತಹ ನೂರಾರು ಸಂತರು ಈ ದೇಶವನು ಉಳಿಸಿದ್ದಾರೆ. ಆ ಅಸ್ತಿತ್ವ ಉಳಿಸುವ ಕೆಲಸ ಸ್ವಾಮೀಜಿಗಳು ಮಾಡುತ್ತಿದ್ದಾರೆ. ಸಾವಿರಾರು ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಚರಿತ್ರೆ ಕೊಟ್ಟಿದ್ದಾರೆ. ಅದನ್ನು
ಪರಿಪೂರ್ಣವಾಗಲು ಈ ಮಠ ಕೊಟ್ಟಿದೆ. ದೇಶ ಕಟ್ಟುವ ಕೆಲಸ ಏನೆಂದು ತೋರಿಸಿದ್ದೀರಿ ನಿಮಗೆ ಕೋಟಿ ಕೋಟಿ ನಮನ, ಇದು ಭದ್ರ ಬುನಾದಿಯಾಗಲಿ ನಮ್ಮ ಪಧಾನಿ ನರೇಂದ್ರ ಮೋದಿಯವರು 2047 ಕ್ಕೆ ವಿಕಸಿತ ಭಾರತದ ಕನಸು ಕಂಡಿದ್ದಾರೆ. ಅದರ ಕನಸು ನನಸು ಮಾಡುವ ವಿದ್ಯಾಶಾಲೆ. ನರೇಂದ್ರ ಮೋದಿಯವರ ಹೆಸರಿನಲ್ಲಿಯೂ ನರೇಂದ್ರ ಇದೆ. ಅವರ ದೂರದೃಷ್ಟಿಯಲ್ಲಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸ ಅವರ ಆದರ್ಶ ಇದೆ. 2047 ರಲ್ಲಿ ಮೋದಿ ಇರುತ್ತಾರಾ ಎಂದು ಕೆಲವರು ಕೇಳಿದ್ದಾರೆ. ಆದರೆ, ಮೊದಿಯವರು ಇರುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ, ಈ ದೇಶ ಇರುತ್ತದೆ ಅದಕ್ಕಾಗಿ ಈ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರ‌ಮದ ಮುಕ್ತಿನಂದಾ ಸ್ವಾಮೀಜಿ, ಸುತ್ತೂರು ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್‌ ಸೇರಿದಂತೆ ಅನೇಕ ಗಣ್ಯರು ಹಾಜರಿದರು.

ಇತ್ತೀಚಿನ ಸುದ್ದಿ

ಜಾಹೀರಾತು