ಇತ್ತೀಚಿನ ಸುದ್ದಿ
ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್ ಕೈವಾಡ; ರಾಜ್ಯ ಸರಕಾರ ಯಾರ ಪರವೂ ಇಲ್ಲ: ಸಚಿವ ಆರ್. ಅಶೋಕ್
09/02/2022, 22:07
ಬೆಂಗಳೂರು(reporterkarnataka.com): ರಾಜ್ಯ ಸರಕಾರ ಹಿಜಾಬ್ ಅಥವಾ ಕೇಸರಿ ಯಾವುದರ ಪರವಾಗಿಯೂ ಇಲ್ಲ. ಹಿಜಾಬ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿದ್ಯಾರ್ಥಿಗಳು ರಸ್ತೆಗಳಲ್ಲಿ ತಮಗೆ ಬೇಕಾದ್ದನ್ನು ಧರಿಸಬಹುದು. ಆದರೆ ಶಾಲೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಿದ್ದೇವೆ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದಿದ್ದಾರೆ.