ಇತ್ತೀಚಿನ ಸುದ್ದಿ
ಹಿಜಾಬ್ ವಿವಾದ: ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ
23/02/2022, 23:21
ಬೆಂಗಳೂರು(reporterkarnataka.com): ಹಿಜಾಬ್ ವಿವಾದ ಕುರಿತು ಅರ್ಜಿಗಳ ಬಗ್ಗೆ ಇಂದು ಕೂಡ ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, ಸರ್ಕಾರದ ಪರ ವಾದ ಹಾಗೂ ಶಿಕ್ಷಕರ ಪರ ವಾದವನ್ನು ಆಲಿಸಿದಂತ ನ್ಯಾಯಪೀಠವು, ಅರ್ಜಿಯ ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರನ್ನೊಳಗೊಂಡ ಪೀಠವು ವಿಚಾರಣೆಯ ವದ ಪ್ರತಿವಾದವನ್ನು ಆಲಿಸಿ ನಾಳೆಗೆ ಮುಂದೂಡಿದೆ.