8:09 PM Friday9 - May 2025
ಬ್ರೇಕಿಂಗ್ ನ್ಯೂಸ್
Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ… Chikkamagaluru | ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ: ಮೂಡಿಗೆರೆ ಸಮೀಪ ಹಸುವನ್ನು ಕೊಂದ…

ಇತ್ತೀಚಿನ ಸುದ್ದಿ

ಹೀಗೊಬ್ಬ ಅಪರೂಪದ ಜರ್ನಲಿಸ್ಟ್: ಪತ್ರಕರ್ತ ರಾಜೇಶ್ ಭಟ್ ಅವರಿಂದ ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

16/05/2022, 21:28

ಮಂಗಳೂರು(reporterkarnataka.com): ಪತ್ರಕರ್ತರು ಸಮಾಜಮುಖಿಯಾಗಿ ವರದಿ ಮಾಡಿರುವುದನ್ನು ನಾವು ಓದಿರುತ್ತೇವೆ. ಆದರೆ ಪತ್ರಕರ್ತರೊಬ್ಬರು ವರದಿಗಾರಿಕೆಯ ಜನತೆ ಸಾಮಾಜಿಕ ಕಳಕಳಿಯಿಂದ ತನ್ನ ಸ್ವಂತ ಖರ್ಚಿನಲ್ಲಿ ಸಮಾಜಮುಖಿಯಾಗಿ ದುಡಿಯುವುದು ಬಹಳ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪ ಎನ್ನಿಸಿಕೊಳ್ಳುವ ಪತ್ರಕರ್ತನೇ ಮಂದಾರ ರಾಜೇಶ್ ಭಟ್ ಅವರು.

ಮಂದಾರ ರಾಮಾಯಣ ಖ್ಯಾತಿಯ ಹೆಸರಾಂತ ಸಾಹಿತಿ ಮಂದಾರ ಕೇಶವ ಭಟ್ ಅವರ ಕುಟುಂಬದಲ್ಲಿ ಹುಟ್ಟಿದ ರಾಜೇಶ್ ಭಟ್  ಅವರು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ದುಡಿದ ಪತ್ರಕರ್ತ. ಇದೀಗ ಅವರು ವಿಸ್ಮಯ ವಾಣಿ ಪತ್ರಿಕೆಯ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜತೆಗೆ ಸೇವಾ ಕಾರ್ಯವನ್ನೂ ನಡೆಸಿಕೊಂಡು ಬಂದಿದ್ದಾರೆ. ರಾಜೇಶ್ ಭಟ್ ಅವರು ವರ್ಷಂಪ್ರತಿಯಂತೆ, ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಶಾಲಾ ವರ್ಷಾರಂಭದಲ್ಲಿ ನೀಡುವ ಪುಸ್ತಕ ವಿತರಣೆಯನ್ನು ಅವರ  ಮಂದಾರ  ತೋಟದ ಮನೆಯಲ್ಲಿ ನಡೆಸಿದ್ದಾರೆ.

ಈ ಸಂದರ್ಭಲ್ಲಿ ಪತ್ರಕರ್ತ ಹರೀಶ್ ಆದೂರು ಮಾತನಾಡಿ, ಮಂದಾರ ರಾಜೇಶ್ ಭಟ್ಟರ ಕೆಲಸವನ್ನು ಸಮಾಜಕ್ಕೆ ಮಾದರಿ ಕೆಲಸ ಎನ್ನುವುದರ ಜೊತೆಗೆ, ಮಕ್ಕಳು ಇಂದು ಈ ಪುಸ್ತಕವನ್ನು ಪಡೆದುಕೊಂಡು ಚೆನ್ನಾಗಿ ಓದಿ ಉತ್ತಮ ಪ್ರಜೆ ಆಗುವುದರ ಜೊತೆಗೆ ಮುಂದೆ ನೀವುಗಳು ಸಹ ದೊಡ್ಡವರಾದ ಬಳಿಕ ಬಡಮಕ್ಕಳಿಗೆ ಸಹಾಯವನ್ನು ನೀಡುವಂತೆ ಕಿವಿ ಮಾತನ್ನು ಹೇಳಿದರು.

ಪತ್ರಕರ್ತೆ ಪದ್ಮಶ್ರೀ ಭಟ್ ಮಾತನಾಡಿ, ಯಾರ ಮುಂದೆಯೂ ಕೈಚಾಚದೆ ತನ್ನ ದುಡಿಮೆಯ ಹಣದಿಂದ ಪ್ರತಿವರ್ಷ  ಬಡಮಕ್ಕಳಿಗೆ ಪುಸ್ತಕ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ನೀಡುತ್ತಿರುವುದು ಶ್ಲಾಘನೀಯ. ನಾನು  ಕಳೆದ ಮೂರು ವರ್ಷಗಳಿಂದ ಇವರ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು ಸಮಾಜಕ್ಕೆ ಮಾದರಿ ಕೆಲಸವಾಗಿದೆ ಎಂದರು.ನಿಶಾ ಸ್ವಾಗತಿಸಿ,ವಂದಿಸಿದರು.

ರಾಜೇಶ್ ಭಟ್ ಅವರು ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸುವುದರ ಜತೆ ಕೆಲವು ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಮಾಸಾಶನ ನೀಡುತ್ತಿದ್ದಾರೆ. ತಮ್ಮ ನೆರೆಕರೆಯಲ್ಲಿ ಯಾರೂ ಕಷ್ಟಕ್ಕೆ ಸಿಲುಕಿದರೂ ಹೆಗಲು ಕೊಡುವ ಜಾಯಮಾನ ಅವರದ್ದಾಗಿದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ದುರಂತ ನಡೆದಾಗಲೂ ಆ ಸಂತ್ರಸ್ತ ಕುಟುಂಬಗಳ ನೆರವಿಗೆ  ಅವರು ನಿಂತಿದ್ದರು. ರಾಜೇಶ್ ಭಟ್ ಅವರಿಂದ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದು ಆಶಿಸೋಣ.

ಇತ್ತೀಚಿನ ಸುದ್ದಿ

ಜಾಹೀರಾತು