ಇತ್ತೀಚಿನ ಸುದ್ದಿ
ಹೈವೇ ಬದಿಯಲ್ಲೇ ಮಳೆ ನೀರು ನಿಲ್ಲುವ ಕೊಳ!: ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲೇ ಇದೆ ಸ್ವಿಮ್ಮಿಂಗ್ ಪೂಲ್
22/07/2023, 14:45
ಮಂಗಳೂರು(reporterkarnataka.com): ಅದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿರುತ್ತದೆ. ಹೈವೇ ಬದಿಯಲ್ಲೇ ಕೊಳ ನಿರ್ಮಾಣವಾಗಿದೆ. ಅಂದ್ರೆ ಮಳೆ ನೀರು ಹರಿದು ಹೋಗದೆ ಕೊಳ ನಿರ್ಮಾಣವಾಗಿದೆ.
ಇದು ಹೆದ್ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಆಗುತ್ತಿದ್ದರೆ ಯಾರೂ ತಲೆ ಬಿಸಿ ಮಾಡುತ್ತಿರಲಿಲ್ಲ. ಬದಲಿಗೆ ದಿನಕ್ಕೆ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವ ಜಾಗದಲ್ಲೇ ನೀರು ನಿಂತಿದೆ. ವಳಚ್ಚಿಲ್ ಸಮೀಪದ ಸಹ್ಯಾದ್ರಿ ಕಾಲೇಜಿನ ಕಾಂಪೌಂಡ್ ಮುಂಭಾಗ ನೀರು ನಿಂತು ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆ ಯಲ್ಲಿ ನಡೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ 2 ದಿನ ಹಿಂದೆ ಯಷ್ಟೇ ಇಲ್ಲಿ ಅಪಘಾತವಾಗಿದೆ. ಬೆಂಗಳೂರು- ಮಂಗಳೂರು ಹೈವೇ ಆಗಿರುವುದರಿಂದ ವಾಹನಗಳ ವೇಗಕ್ಕೆ ಏನು ಕಡಿಮೆ ಇಲ್ಲ.
ಸ್ಥಳೀಯ ನಾಗರಿಕರಾದ ಮಹೇಶ್ ಅವರು
ಹೇಳುವ ಪ್ರಕಾರ ರಸ್ತೆ ಬದಿ ಇಂಟರ್ ಲಾಕ್ ಅಳವಡಿಕೆಯಿಂದ ತೋಡು ಮುಚ್ಚಿದೆ ಎಂಬುದು ಆರೋಪ. ಈ ಬಗ್ಗೆ ಆದಷ್ಟು ಬೇಗ ಸಂಬಂಧ ಪಟ್ಟ ಪಂಚಾಯತ್ ಕ್ರಮ ಜರುಗಿಸಿ ವಿದ್ಯಾರ್ಥಿಗಳ ಜೀವ ರಕ್ಷಿಸಬೇಕು ಎನ್ನುವುದು ಸ್ಥಳೀಯ ಆಗ್ರಹ.