ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಡೆ ನಿಗೂಢ: ಸಚಿವ ಎಚ್. ಸಿ. ಮಹದೇವಪ್ಪ
14/10/2025, 10:12

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಗೆ ಬಿಟ್ಟಂತ ವಿಚಾರ, ಅವರ ನಡೆ ನಿಗೂಢವಾಗಿದೆ ಎಂದು ಸಚಿವ ಹೆಚ್. ಸಿ ಮಹದೇವಪ್ಪ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿನಂತೆ ಔತಣಕೂಟ ಕರೆದಿದ್ದಾರೆ ಅದರಲ್ಲಿ ಏನೂ ವಿಶೇಷ ಇಲ್ಲ ಎಂದರು. ಇನ್ನು ಮಾಜಿ ಸಂಸದ ಹಾಗೂ ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನೀಡಿದ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು ಬಿಜೆಪಿ ನಲ್ಲಿ ಇರುವ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಬಗ್ಗೆ ಚಿಂತೆ ಬೇಡ, ಇಟ್ ಇಸ್ ನನ್ ಆಫ್ ಹಿಸ್ ಬಿಸಿನೆಸ್ ಎಂದು ಖಾರವಾಗಿ ನುಡಿದರು.