ಇತ್ತೀಚಿನ ಸುದ್ದಿ
ಹೆಣ ಊಳುವ ವಿಚಾರ: ಕಾಫಿನಾಡಲ್ಲಿ ಎರಡು ಜಾತಿಗಳ ಮಧ್ಯ ವಾರ್; ಶವ ಊಳುವ ಗುಂಡಿಗೆ ಇಳಿದು ಗ್ರಾಪಂ ಮಾಜಿ ಅಧ್ಯಕ್ಷೆ ಪ್ರತಿಭಟನೆ
06/12/2024, 22:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೆಣ ಊಳುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಜಾತಿಗಳ ಮಧ್ಯ ಗಲಾಟೆ ನಡೆದಿದ್ದು, ಶವ ಊಳುವ ಗುಂಡಿಗೆ ಇಳಿದು
ಮಹಿಳೆಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಹಲವು ದಶಕಗಳಿಂದ ಜಾಗದ ವಿವಾದ ಬೂದಿ ಮುಚ್ಚಿದ ಕೆಂಡದಂತಿತ್ತು. ಇಂದು ವಿವಾದಿತ ಜಾಗ ನಮ್ಮದೆಂದು ಶವ ಊಳುಲು ಹೋದ ಒಂದು ನಿರ್ದಿಷ್ಟ ಜಾತಿಗೆ ಇನ್ನೊಂದು ಜಾತಿ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಯಿತು.
ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಹೆಣ ಊಳುವುದನ್ನು ವಿರೋಧಿಸಿತು.ಗುಂಡಿಗೆ ಇಳಿದು ಶವ ಊಳಲು ಒಂದು ಸಮುದಾಯದ ಮಹಿಳೆ ವಿರೋಧ ವ್ಯಕ್ತಪಡಿಸಿದರು. ಇವರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ. ಮಾಜಿ ಅಧ್ಯಕ್ಷತೆಯ ಜತೆ ಮೂರ್ನಾಲ್ಕು ಮಹಿಳೆಯರು ಗುಂಡಿಯೊಳಗೆ ಇಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಲ್ದೂರು
ಪೊಲೀಸರು ಎಲ್ಲರನ್ನು ಎಳೆದು ಮೇಲೆ ಹಾಕಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.