ಇತ್ತೀಚಿನ ಸುದ್ದಿ
ಅವ್ಯಾಹತ ಮಳೆ: ಬಂಟ್ವಾಳ ತಾಲೂಕಿನಲ್ಲಿ ಮರ ಬಿದ್ದು 5ಕ್ಕೂ ಹೆಚ್ಚು ಮನೆಗಳಿಗೆ ಹಾನಿ
25/07/2025, 20:10

ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಬಂಟ್ವಾಳ ತಾಲೂಕಿನಲ್ಲಿ 5ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೂಜಂತೂಡಿ ಎಂಬಲ್ಲಿ ಡಾಕಯ್ಯ ಪೂಜಾರಿ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಹಾನಿಗೀಡಾಗಿದೆ.
ಕಾವಳಮುಡೂರು ಗ್ರಾಮದ ಕೆದ್ದಳಿಕೆ ನಿವಾಸಿ ಪದ್ಮಾವತಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಗೊಳಗಾಗಿದೆ.
ದೇವಸ್ಯ ಪಡೂರು ಗ್ರಾಮದ ನುರ್ತಾಡಿ ನಿವಾಸಿ ಯಮುನಾ ಕೋಂ ರುಕ್ಮಯ ಪೂಜಾರಿ ರವರ ಮನೆಯ ಹಿಂಭಾಗ ದ ಗೋಡೆ ಕುಸಿತವಾಗಿ ಹಾನಿಯುಂಟಾಗಿದೆ.ಕೇಪು ಗ್ರಾಮದ ಗುತ್ತುದಡ್ಕ ಎಂಬಲ್ಲಿ ನಾರಾಯಣ ಎಂಬವರ ಮನೆಯ ಮುಂಭಾಗ ಅಳವಡಿಸಿರುವ ಶೀಟ್ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ. ಯಾವುದೇ ಪ್ರಾಣಹಾನಿ ಸಭವಿಸಿಲ್ಲ. ಪಿಲಾತಬೆಟ್ಟು ಗ್ರಾಮದ ಕವಿತಾ ಅವರ ಮನೆಗೆ ಇಂದು ಬೆಳಿಗ್ಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ.