ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ
17/08/2025, 16:49

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು,ವಮಘೆ ಮಳೆ ಅಬ್ಬರಕ್ಕೆ ಮಲೆನಾಡು ಅಕ್ಷರಶಃ ಜಲಾವೃತಗೊಂಡಿದೆ.
ಶೃಂಗೇರಿಯಲ್ಲಿ ತುಂಗಾ ನದಿ ಅಬ್ಬರಕ್ಕೆ ರಸ್ತೆಗಳೇ ಜಲಾವೃತವಾಗಿವೆ. ಕಿಗ್ಗಾ-ಮಳೂರು-ಕೋಗಿನಬೈಲು-ಮೇಲ್ಗಟ್ಟ ಗ್ರಾಮದ ರಸ್ತೆಗಳು ಜಲಾವೃತಗೊಂಡಿವೆ.
ಮೂಡಿಗೆರೆಯ ಕೊಟ್ಟಿಗೆಹಾರ-ಚಾರ್ಮಾಡಿಯಲ್ಲಿ ಮಳೆ ಅಬ್ಬರಕ್ಕೆ ವಾಹನ ಸವಾರರ ಪರದಾಟ ಹೆಚ್ಚಾಗಿದೆ.
ಮೂಡಿಗೆರೆಯಲ್ಲಿ ಕಳೆದ 5 ಗಂಟೆಯಿಂದ ನಿರಂತರವಾಗಿ ಮಳೆ ಸುರಿದಿದೆ. ಶೃಂಗೇರಿಯ ಮರಿಗೆಬೈಲು ಬಳಿ ಬಸ್-ಮಿನಿ ಟ್ರಕ್ ಡಿಕ್ಕಿ, ಮೂವರು ಗಾಯಗೊಂಡಿದ್ದಾರೆ.
ಶೃಂಗೇರಿಯ ಗಾಂಧಿ ಮೈದಾನದ ಪ್ಯಾರಲಲ್ ರಸ್ತೆ ಜಲಾವೃತಗೊಂಡಿದೆ. ಮೂಡಿಗೆರೆಯ ಬಿದರಹಳ್ಳಿ ಬಳಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.