ಇತ್ತೀಚಿನ ಸುದ್ದಿ
ಮೂಡಿಗೆರೆ ಸುತ್ತಮುತ್ತ ಧಾರಾಕಾರ ಮಳೆ: ಬಾಳೂರಿನ ಕಲ್ಲಕ್ಕಿಯ ಮುಖ್ಯ ರಸ್ತೆಗೆ ಉರುಳಿದ ಮರ
26/03/2025, 20:01

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಬಣಕಲ್, ಪಲ್ಗುಣಿ, ಸಬ್ಬೆನಹಳ್ಳಿ ಮುಂತಾದ ಕಡೆ ಧಾರಕಾರ ಮಳೆಯಾಯಿತು. ವಿಪರೀತ ಗಾಳಿಗೆ ಬಾಳೂರು ಸಮೀಪದ ಕಲ್ಲಕ್ಕಿ ಮುಖ್ಯ ರಸ್ತೆಗೆ ಬೃಹತ್ ಕಾರದ ಮರ ಉರುಳಿ ಕೆಲವು ಕಾಲ ಸಂಚಾರ ಸ್ಥಗಿತವಾಗಿತ್ತು. ಸ್ಥಳೀಯರಿಂದ ಮರವನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮರ ಬಿದ್ದ ಪರಿಣಾಮದಿಂದ ಶೃಂಗೇರಿ ಕೊಟ್ಟಿಗೆಹಾರ ರಸ್ತೆ ಕೆಲಕಾಲ ಸಹಿತಗೊಂಡಿತ್ತು. ಮಳೆಯಿಂದ ರೈತರ *ಮುಖದಲ್ಲಿ ಮಂದಹಾಸ:* ಕಾಫಿ ಬೆಳೆಗೆ ನೀರಿಲ್ಲದೆ ಕಾಫಿ ಗಿಡಗಳು ಹೂ ಅರಳಿ ಒಣಗುತ್ತಿದ್ದು ಮಳೆಯಿಂದ ಕಾಫಿ ಬೆಳೆಗೆ ಅನುಕೂಲವಾಯಿತು. ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿತು.