ಇತ್ತೀಚಿನ ಸುದ್ದಿ
ಕಳಸ ತಾಲೂಕಿನಾದ್ಯಂತ ಭಾರೀ ಮಳೆ: ಹೆಮ್ಮಕ್ಕಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ; ಹಳುವಳ್ಳಿ – ಹೊರನಾಡು ಮದ್ಯೆ ಸಂಚಾರ ಅಸ್ತವ್ಯಸ್ತ
05/04/2025, 22:25

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳಸ ತಾಲ್ಲೂಕಿನಾಧ್ಯಂತ ಶನಿವಾರ ಸುರಿದ ಮಳೆಯಿಂದಾಗಿ ಇಡಕಣಿ ಗ್ರಾಮ ಪಂಚಾಯಿತಿ ಹೆಮ್ಮಕ್ಕಿ ಗ್ರಾಮದ ಎಳ್ಳುಕುಡಿಗೆ ಸುಂದರಿ ಎಂಬುವವರ ಮನೆಗೆ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಹಳುವಳ್ಳಿ ಹೊರನಾಡು ಮದ್ಯೆ ವಿದ್ಯುತ್ ತಂತಿ ಮೇಲೆ ಅಡಕೆ ಮರವೊಂದು ಬಿದ್ದು ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಕಳಸ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಜೋರಾಗಿ ಮಳೆ ಸುರಿದಿದೆ. ಮಳೆ ಹಿನ್ನಲೆಯಲ್ಲಿ ಮಳೆಯಿಂದ ಕಳಸ ಪಟ್ಟಣದಲ್ಲಿ ಕೆಲ ಹೊತ್ತು ವಾಹನ ಸಂಚಾರವೂ ಸ್ಥಗಿತಗೊಂಡಿತು.