ಇತ್ತೀಚಿನ ಸುದ್ದಿ
ಚಿಕ್ಕಮಗಳೂರಿನ ಹಲವೆಡೆ ಭಾರೀ ಮಳೆ: ರಸ್ತೆಗುರುಳಿದ ಬೃಹತ್ ಮರ; ಕಳಸ ಟು ಮೂಡಿಗೆರೆ ಸಂಚಾರ ಬಂದ್
25/03/2025, 11:43

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆಯಾಗಿದೆ.
ಕಳಸ ಸುತ್ತಮುತ್ತ ಬೆಳ್ಳಂಬೆಳಗ್ಗೆಯೇ ಭಾರೀ ಗಾಳಿ-ಮಳೆಯಾಗಿದೆ. ಭಾರೀ ಗಾಳಿಗೆ ಬೃಹತ್ ಮರಗಳು ಧರೆಗುರುಳಿವೆ. ಕಳಸದಿಂದ ಮೂಡಿಗೆರೆ ಮಾರ್ಗ ತಾತ್ಕಾಲಿಕ ಬಂದ್ ಆಗಿದೆ. ಸ್ಥಳಿಯರಿಂದ ಮರ ತೆರವು ಕಾರ್ಯ ನಡೆಯುತ್ತಿದೆ.
ಕಳಸ ತಾಲೂಕಿನ ಹಿರೇಬೈಲ್-ಮರಸಣಿಗೆ ಬಳಿ ಈ ಘಟನೆ ನಡೆದಿದೆ.ಬ ಹಿರೇಬೈಲ್, ಮರಸಣಿಗೆ, ಯಡಿಯೂರು ಸುತ್ತಾಮುತ್ತಾ ಭಾರೀ ಗಾಳಿ ಮಳೆಯಾಗಿದೆ.